
ಭಟ್ಕಳ: ರಾಜ್ಯದಲ್ಲಿ ಭೂಸುಧಾರಣಾ ಕಾಯಿದೆ ಜಾರಿಯಾದ ಪರಿಣಾಮ ಜೀತ ಪದ್ಧತಿ ನಿರ್ಮೂಲನೆಯಾಗಿ, ಹಿಂದುಳಿದ ವರ್ಗದ ರೈತರು ಸ್ವಂತ ಭೂಮಿಯನ್ನು ಹೊಂದುವAತಾಯಿತು. ಈ ಕಾಯಿದೆ ಸಮಾಜ ಪರಿವರ್ತನೆಯ ಶಕ್ತಿಯಾಗಿ ಪರಿಣಮಿಸಿದೆ” ಎಂದು ಉಪವಿಭಾಗದ ಸಹಾಯಕ ಆಯುಕ್ತೆ ಕುಮಾರಿ ಕಾವ್ಯರಾಣಿ ಕೆ. ಅಭಿಪ್ರಾಯಪಟ್ಟರು. ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ್ ಜಾಲಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಡಿ. ದೇವರಾಜ ಅರಸು ಭವನದಲ್ಲಿ ಬುಧವಾರ ನಡೆದ ದಿವಂಗತ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 110ನೇ ಜನ್ಮದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾನತೆಯ ಬಿತ್ತನೆ ಮಾಡಲು ಅವರು ಮಾಡಿದ ಕೆಲಸ ಇಂದಿಗೂ ಸ್ಮರಣೀಯ ಎಂದು ಅವರು ಶ್ಲಾಘಿಸಿದರು. ವಿದ್ಯಾರ್ಥಿಗಳು ಪಿಯುಸಿ ನಂತರ ತಮ್ಮ ಇಷ್ಟದ ವಿಷಯವನ್ನು ಆರಿಸಿಕೊಂಡು ಓದಬೇಕು. ಪಠ್ಯಪುಸ್ತಕಗಳ ಜೊತೆ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನದ ಓದನ್ನು ಅಂದೇ ಮುಗಿಸುವ ಶಿಸ್ತು ಬೆಳೆಸಿದರೆ ಸಾಧನೆ ಸಾಧ್ಯ. ಯೋಗ, ಧ್ಯಾನದಿಂದ ದೈಹಿಕ-ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆಯಿದ್ದರೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಬೌದ್ಧಿಕ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೌಲಭ್ಯವನ್ನು ಹೆಚ್ಚಿನವರು ಉಪಯೋಗಿಸಿಕೊಳ್ಳಬೇಕು. ದೇವರಾಜ ಅರಸುರವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದ ಪ್ರತಿಭಾವಂತರಿಗೆ ಸನ್ಮಾನ ಸಲ್ಲಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಿವಕುಮಾರ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಎಂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ