August 30, 2025

ಜಿಲ್ಲೆಗೊಂದು ಸಿಂಥಟಿಕ್ ಕ್ರೀಡಾಂಗಣ:ಉತ್ತರ ಕನ್ನಡ ಜಿಲ್ಲೆಯು “ರಾಷ್ಟ್ರೀಯ”  ಕ್ರೀಡಾ ನೀತಿಯಿಂದ ವಂಚಿತ-ರವೀ0ದ್ರ ನಾಯ್ಕ

ಶಿರಸಿ: ಜಿಲ್ಲೆಗೊಂದು ಸಿಂಥೆಟಿಕ್ ಕ್ರೀಡಾಂಗಣವು ಕ್ರೀಡಾ ಸಾಧನೆಗೆ ಪೂರಕವೆಂಬ ತತ್ವದಲ್ಲಿ ಭಾರತ ಸರಕಾರ “ರಾಷ್ಟ್ರೀಯ”  ಕ್ರೀಡಾ ನೀತಿ ಜಾರಿಗೆ ತಂದು ದಶಕ ಉರಳಿದರೂ, ಜಿಲ್ಲೆಗೊಂದು ಸಿಂಥೆಟಿಕ್ ಕ್ರೀಡಾಂಗಣ ಎಂಬ “ರಾಷ್ಟ್ರೀಯ” ಕ್ರೀಡಾ ನೀತಿಯಿಂದ ಉತ್ತರ ಕನ್ನಡ ಜಿಲ್ಲೆಯು ವಂಚಿತವಾಗಿದೆ ಎಂದು ಸ್ಪಂದನಾ ಸ್ಪೋಟ್ಸ್ ಅಕಾಡೆಮಿಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ವರ್ಷದ ಪ್ರಾರಂಭದಲ್ಲಿಯೇ, ತೀವ್ರ ಮಳೆಗಾಲ ಎದರುರಿಸಬೇಕಾದ ಕ್ರೀಡಾ ಪಟುಗಳಿಗೆ ಸುಸ್ಸಜ್ಜಿತ ಸರ್ವಋತು ಕ್ರೀಡಾಗಂಗಣ ಅತೀ ಅವಶ್ಯ. ಅವೈಜ್ಞಾನಿಕ ಮತ್ತು ಮಳಿಯಲ್ಲಿಯೇ ನೀಡುವುದು ಕ್ರೀಡಾಕೂಟ ಜರುಗುತ್ತಿರುವುದು ಗಮನಾರ್ಹ. ಕ್ರೀಡಾಂಗಣದ ಬೌತಿಕ ಸಾಮಥ್ಯ ಹೆಚ್ಚಿಸುವ ಜೊತೆಯಲ್ಲಿ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಕ್ಕೆ ಒತ್ತು ಸಮಂಜಸ. ಮಳೆಗಾಲದಲ್ಲಿ ಜರುಗಿದ ಮಳೆಗಾಲದಲ್ಲಿ ಓಟದ ಪತ ಕೆಸರು ಗದ್ದೆಯಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೆಸರುಗದ್ದೆಯಲ್ಲಿ ಓಡಿದ ಅನುಭವವಾಗುವುದರಲ್ಲಿ ಸಂಶಯವಿಲ್ಲ.
ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಅತೀ ಹೆಚ್ಚಿನ ವಿಸ್ತಾರ ಹೊಂದಿರುವ ಶಿರಸಿಯಲ್ಲಿನ ಜಿಲ್ಲಾ ಮಾರಿಕಾಂಬ ಕ್ರೀಡಾಂಗಣವೆ0ದು ಖ್ಯಾತಿ ಪಡೆದಿದೆ. ಆದರೆ, ಬೌಗೋಳಿಕವಾಗಿ ಉತ್ತರಕನ್ನಡಕ್ಕಿಂತಲೂ ಚಿಕ್ಕದಾಗಿರುವ ಕೊಡಗು, ಉಡುಪಿ, ಗದಗ, ಕೊಪ್ಪಳ, ಹಾವೇರಿ, ಬೀದರ್, ಕೋಲಾರ್, ವಿಜಯನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರುಗಳಲ್ಲಿ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಅಲ್ಲದೇ, ಉತ್ತರ ಕರ್ನಟಕ ಯಲುಸೀಮೆಗಳಂತಾದ
ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಆದರೆ, ಮಳೆ ಹೆಚ್ಚಿರುವ ಮಲೆನಾಡು ಮತ್ತು ಕರಾವಳಿ ಪ್ರದೇಶ ಹೊಂದಿರವ ಉತ್ತರಕನ್ನಡ ಜಿಲ್ಲೆಯಲ್ಲಿ ಸಿಂಥೆಟಿಕ್ ಕ್ರೀಡಾಂಗಣದಿAದ ವಂಚಿತರಾಗಿರುವುದು ವಿಷಾಧಕರವೆಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕ್ರೀಡಾಮಗಣದ ವ್ಯವಸ್ಥೆ:
ಕಳೆದ ಮೂರು ದಶಕದಿಂದ ಕ್ರೀಡಾಸಕ್ತರು ಜಿಲ್ಲಾ ಕ್ರಿಡಾಂಗಣ ಶಿರಸಿಯಲ್ಲಿರುವ ಮಾರಿಕಾಂಬ ಕ್ರೀಡಾಂಗಣಕ್ಕೆ ಸಿಂಥೆಟಿಕ್ ನೆಲಹಾಸು, ತರಬೇತುದಾರುರು ಕ್ರೀಡಾಪಟುಗಳ ದೈಹಿಕ ಸಾಮಥ್ಯದ ಆಧುನಿಕ ಉಪಕರಣ, ಕೊರತೆ ಭದ್ರತೆ ಇಲ್ಲದ ಆವರಣ, ಹೊರಾಂಗಣ ಗಿಡ ಗಂಟಿಯಿAದ ತುಂಬಿರುವುದು ಹಾಗೂ ಬೆಳಕಿನ ಕೊರತೆಗಳ ಕುರಿತು ಸರಕಾರದ ಗಮನ ಸೇಳೆಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರೀಡಾಪಟುಗಳಿಗೆ ಸೌಲಭ್ಯ ಅವಶ್ಯ :

ಜಿಲ್ಲೆಯ ಯುವ ಕ್ರೀಡಾಪಟುಗಳ ಕ್ರೀಡಾಪೂರಕ, ಕ್ರೀಡಾ ವ್ಯವಸ್ಥೆಯ ಉತ್ತಮ ತರಬೇತುದಾರರೊಂದಗೆ ಕ್ರೀಡಾಭಿವೃದ್ದಿ, ಕ್ರೀಯಾ ಯೋಜನೆ ತರುವಲ್ಲಿ ಸರಕಾರದ ಇಚ್ಚಾಶಕ್ತಿ ಅವಶ್ಯ. ಇತ್ತೀಚಿನ ಮೂರು ದಶಕಗಳಿಂದ ಜಿಲ್ಲೆಯ, ಮಾನಸಿಕ ದೈಹಿಕ ಮತ್ತು ಪ್ರತಿಭಾವಂತ ಕ್ರೀಡಾಪಟುಗಳು ಇದ್ದರು, ಸರಕಾರದ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆಯಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿರುವುದು ವಿಷಾಧಕರವೆಂದು
ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

About The Author