November 19, 2025

ಭೈರವಿ ಮಹಿಳಾ ಸಗಕಾರಿ ಸಂಘದ ವಾರ್ಷಿಕ ಮಹಾಸಭೆ – ಲಕ್ಷ್ಮೀ ಪೂಜೆ

ಹೊನ್ನಾವರ; ತಾಲೂಕಿನ ಭೈರವಿ ಮಹಿಳಾ ಸಹಕಾರಿ ಸಂಘ ನಿಯಮಿತ ಹೊನ್ನಾವರ ಇದರ ವಾರ್ಷಿಕ ಮಹಾಸಭೆ, ಲಕ್ಷ್ಮೀಪೂಜೆ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮ ಶುಕ್ರವಾರ ಕೆಳಗಿನೂರು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಿರ್ಜಾನ್ ಕುಮಟಾ ಸ್ವಾಮೀಜಿಯವರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವಹಿಸಿ ಪೂಜಾಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ಮಹಿಳೆಯರು ಸಂಘಟನೆಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಭೈರವಿ ಸಹಕಾರಿ ಸಂಘ ನೆರವಾಗಿದೆ. ಅತಿಕಡಿಮೆ ಅವಧಿಯಲ್ಲಿ ಹೆಚ್ಚು ವ್ಯವಹಾರನ್ನು ನಡೆಸುವ ಒಂದು ಮಾದರಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಎಲ್ಲಾ ಮಹಿಳೆಯರಿಗೂ ಒಳಿತಾಗಲಿ, ಲಕ್ಷ್ಮಿದೇವಿಯ ಕೃಪಾಕಟಾಕ್ಷದಿಂದ ಎಲ್ಲರ ಬಾಳು ಸಮೃದ್ದಿಯಾಗಲಿ ಎಂದು ಆಶೀರ್ವದಿಸಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಕೃಷ್ಣ ಜೆ.ಗೌಡ, ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಸಂಘದ ನಿರ್ದೇಶಕರುಗಳು, ಮುಖಂಡುರುಗಳು ಹಾಜರಿದ್ದರು.

ನಂತರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಂತಿ ಮಾದೇವಗೌಡ ಮಾತನಾಡಿ ಸಂಘವು 2024-25ನೇ ಸಾಲಿನಂತ್ಯಕ್ಕೆ 1111 ಸದಸ್ಯರು ಮತ್ತು 91 ಸ್ವ ಸಹಾಯ ಸಂಘವನ್ನು ಹೊಂದಿದ್ದು, ರೂ 1.50 ಕೋಟಿ ದುಡಿಯುವ ಬಂಡವಾಳದಿAದ ರೂ. 1.37 ಕೋಟಿ ಸಾಲ ನೀಡಿರುತ್ತದೆ. ಶೇ 100 ರಷ್ಟು ವಸೂಲಾತಿ ಸಾಧಿಸಿದ್ದು ರೂ 4.26 ಲಕ್ಷ ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇರಿನ ಮೇಲೆ ಶೇ 10.00 ಡಿವಿಡೆಂಟ್ ನೀಡಿರುವುದಾಗಿ ತಿಳಿಸಿದರು. ಸಂಘದ ಪ್ರಗತಿಗೆ ಕಾರಣೀಕರ್ತರಾದ ಎಲ್ಲಾ ಸದಸ್ಯರಿಗೆ, ಠೇವುದಾರರಿಗೆ, ಸ್ವ ಸಹಾಯ ಸಂಘಗಳ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ವಿಷಯ ಪಟ್ಟಿಯ ಪ್ರಕಾರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು ಸಂಘದ ಮುಖ್ಯಕಾರ್ಯನಿರ್ವಾಹಕಿ ಪವಿತ್ರಾ ಗೌಡ ವಿಷಯವನ್ನು ಮಂಡಿಸಿದರು, ನಿರ್ದೇಶಕಿ ಭಾಗೀರಥಿ ಗೊಂಡ ಇವರು ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರುಗಳು ಮತ್ತು ಸದಸ್ಯರು ಹಾಜರಿದ್ದರು, ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಎಲ್ಲಾ ಮಹಿಳೆಯರಿಗೂ ಅರಿಶಿಣ ಕುಂಕುಮದ ಜೊತೆ ಪ್ರಸಾದ ಬೋಜನ ನೀಡಲಾಯಿತು.ಭೈರವಿ ಮಹಿಳಾ ಸಗಕಾರಿ ಸಂಘದ ವಾರ್ಷಿಕ ಮಹಾಸಭೆ – ಲಕ್ಷ್ಮೀ ಪೂಜೆ
ಹೊನ್ನಾವರ; ತಾಲೂಕಿನ ಭೈರವಿ ಮಹಿಳಾ ಸಹಕಾರಿ ಸಂಘ ನಿಯಮಿತ ಹೊನ್ನಾವರ ಇದರ ವಾರ್ಷಿಕ ಮಹಾಸಭೆ, ಲಕ್ಷ್ಮೀಪೂಜೆ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮ ಶುಕ್ರವಾರ ಕೆಳಗಿನೂರು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಿರ್ಜಾನ್ ಕುಮಟಾ ಸ್ವಾಮೀಜಿಯವರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವಹಿಸಿ ಪೂಜಾಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ಮಹಿಳೆಯರು ಸಂಘಟನೆಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಭೈರವಿ ಸಹಕಾರಿ ಸಂಘ ನೆರವಾಗಿದೆ. ಅತಿಕಡಿಮೆ ಅವಧಿಯಲ್ಲಿ ಹೆಚ್ಚು ವ್ಯವಹಾರನ್ನು ನಡೆಸುವ ಒಂದು ಮಾದರಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಎಲ್ಲಾ ಮಹಿಳೆಯರಿಗೂ ಒಳಿತಾಗಲಿ, ಲಕ್ಷ್ಮಿದೇವಿಯ ಕೃಪಾಕಟಾಕ್ಷದಿಂದ ಎಲ್ಲರ ಬಾಳು ಸಮೃದ್ದಿಯಾಗಲಿ ಎಂದು ಆಶೀರ್ವದಿಸಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಕೃಷ್ಣ ಜೆ.ಗೌಡ, ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಸಂಘದ ನಿರ್ದೇಶಕರುಗಳು, ಮುಖಂಡುರುಗಳು ಹಾಜರಿದ್ದರು.

ನಂತರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಂತಿ ಮಾದೇವಗೌಡ ಮಾತನಾಡಿ ಸಂಘವು 2024-25ನೇ ಸಾಲಿನಂತ್ಯಕ್ಕೆ 1111 ಸದಸ್ಯರು ಮತ್ತು 91 ಸ್ವ ಸಹಾಯ ಸಂಘವನ್ನು ಹೊಂದಿದ್ದು, ರೂ 1.50 ಕೋಟಿ ದುಡಿಯುವ ಬಂಡವಾಳದಿAದ ರೂ. 1.37 ಕೋಟಿ ಸಾಲ ನೀಡಿರುತ್ತದೆ. ಶೇ 100 ರಷ್ಟು ವಸೂಲಾತಿ ಸಾಧಿಸಿದ್ದು ರೂ 4.26 ಲಕ್ಷ ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇರಿನ ಮೇಲೆ ಶೇ 10.00 ಡಿವಿಡೆಂಟ್ ನೀಡಿರುವುದಾಗಿ ತಿಳಿಸಿದರು. ಸಂಘದ ಪ್ರಗತಿಗೆ ಕಾರಣೀಕರ್ತರಾದ ಎಲ್ಲಾ ಸದಸ್ಯರಿಗೆ, ಠೇವುದಾರರಿಗೆ, ಸ್ವ ಸಹಾಯ ಸಂಘಗಳ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ವಿಷಯ ಪಟ್ಟಿಯ ಪ್ರಕಾರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು ಸಂಘದ ಮುಖ್ಯಕಾರ್ಯನಿರ್ವಾಹಕಿ ಪವಿತ್ರಾ ಗೌಡ ವಿಷಯವನ್ನು ಮಂಡಿಸಿದರು, ನಿರ್ದೇಶಕಿ ಭಾಗೀರಥಿ ಗೊಂಡ ಇವರು ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರುಗಳು ಮತ್ತು ಸದಸ್ಯರು ಹಾಜರಿದ್ದರು, ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಎಲ್ಲಾ ಮಹಿಳೆಯರಿಗೂ ಅರಿಶಿಣ ಕುಂಕುಮದ ಜೊತೆ ಪ್ರಸಾದ ಬೋಜನ ನೀಡಲಾಯಿತು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!