ಶರಾವತಿಗೆ ನೆರೆ. ಅಳ್ಳಂಕಿ ಗಾಬಿತಕೇರಿಗೆ ಸುತ್ತುವರಿದಿರುವ ನೆರೆ ನೀರು.ರಸ್ತೆ ಸಂಪರ್ಕ ಕಡಿತ. ೧೨ ಕುಟುಂಬ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ.
ಹೊನ್ನಾವರ : ಲಿಂಗನಮಕ್ಕಿ ಮತ್ತು ಗೇರುಸೊಪ್ಪೆಯ ಜಲಾಶಯದಿಂದ ಗುರುವಾರ ೭೫೦೦೦ಕ್ಯೂಸಕ್ಷ್ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಎಲ್ಲ ಅಪಾಯದ ಆತಂಕ ಇರುವ ಕಡೆಯ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಗೊಳ್ಳುವಂತೆ ಮನವಿ ಮಾಡಲಾಯಿತು. ಇದೇ ಸಂಧರ್ಬದಲ್ಲಿ ಕಾಳಜಿ ಕೇಂದ್ರಕ್ಕೆ ರಾತ್ರಿ ೯ಘಂಟೆಗೆ ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಕಾ0ತ ಕೊಚರೇಕರ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಉಪತಹಶೀಲ್ದಾರರಲ್ಲಿ ನೆರೆ ಸಂತ್ರಸ್ತರ ಹಿತರಕ್ಷಣೆಗೆ ಸಂಬAಧಿಸಿ ಚರ್ಚಿಸಿ. ಊಟ,ವಸತಿ ಮತ್ತು ಉಸ್ತುವಾರಿಗೆ ತಾಲೂಕು ಆಡಳಿತ ತೆಗೆದುಕೊಂಡಿರುವ ಕ್ರಮ ಸಮಾಧಾನಕರವಾಗಿದೆ ಎಂದು ತಿಳಿಸಿದರು. ಸ್ಥಳೀಯ ಗ್ರಾಮ ಪಂಚಾಯತ ಸಿಬ್ಬಂದಿ ಮತ್ತು ಇನ್ನುಳಿದ ಇಲಾಖೆಯ ಸಿಬ್ಬಂದಿ ಹಾಗೂ ಪ್ರೌಢಶಾಲೆಯ ಬಿಸಿ ಊಟದ ಸಿಬ್ಬಂದಿ ಸ್ಥಳದಲ್ಲಿದ್ದರು.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”