August 29, 2025

ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ

ಹೊನ್ನಾವರ: ತಾಲೂಕಿನ ಭಾಸ್ಕೇರಿ ಹೊಳೆಯಿಂದ ಮಳೆಗಾಲದ ಸಮಯದಲ್ಲಿ ನೆರೆಯಿಂದ ಬಾದಿತವಾಗಿರುವ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಭಾಸ್ಕೇರಿ, ಗಜನಿಕೇರಿ, ದೊಡ್ಡಹಿತ್ತಲ್ ಭಾಗದ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡುವತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಉದ್ದಿಮೆದಾರರು ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ ಆಗ್ರಹಿಸಿದ್ದಾರೆ.

ಶುಕ್ರವಾರ ನಿರಂತರವಾಗಿ ಸುರಿದ ಮಳೆ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆಯಿಂದ ಭಾಸ್ಕೇರಿ ಹೊಳೆಯು ತುಂಬಿ ಹರಿಯುತ್ತಿದ್ದು, ಭಾಸ್ಕೇರಿ, ದೊಡ್ಡಹಿತ್ತಲ್ ಭಾಗದ ಮನೆ ಹಾಗೂ ತೋಟಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟುಮಾಡಿತ್ನ್ತು, ಜನರನ್ನು ಸುರಕ್ಷಿತವಾಗಿ ಕಾಳಜಿಕೇಂದ್ರದತ್ತ ತರಲು ಅಧಿಕಾರಿಗಳು ಅಗ್ನಿಶಾಮಕದಳದವರು ಯಶ್ವಸಿಯಾಗಿದ್ದಾರೆ. ಮನೆಗೆ ನೀರು ನುಗ್ಗಿರುದರಿಂದ ಮನೆಯ ವಸ್ತುಗಳು ನೀರು ಪಾಲಾಗಿದ್ದವು. ಸಾರ್ವಜನಿಕರು ಭಾಸ್ಕೇರಿ ಕಾಳಜಿ ಕೇಂದ್ರದಲ್ಲಿ ಇರುವ ಮಾಹಿತಿ ದೊರೆತ ತಕ್ಷಣ ಉದ್ದಿಮೆದಾರರಾದ ಮಂಜುನಾಥ ನಾಯ್ಕ ಭಾಸ್ಕೇರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ಆಗಮಿಸಿ, ದಿನಬಳಕೆವಸ್ತು ನೀಡಿ, ಮಕ್ಕಳಿಗೆ ಚಾಕಲೇಟ್ ನೀಡಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು. ಇದೆ ವೇಳೆ ಸ್ಥಳಿಯರು ಬದಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ತಮ್ಮ ಮನವಿಯನ್ನು ಮುಂದಿನ ದಿನದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ವಿ.ಎಸ್.ಎಸ್ ಉಪಾಧ್ಯಕ್ಷ ವಿನಾಯಕ ಶೆಟ್ಟಿ, ಸ್ಥಳಿಯರಾದ ಈಶ್ವರ ಮುಕ್ರಿ, ಗಜಾನನ, ಸುಬ್ರಹ್ಮಣ್ಯ ಮತ್ತಿತರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author