August 31, 2025

ಗಣೇಶೊತ್ಸವ ಪ್ರತಿಷ್ಟಾಪನಾ ಸ್ಥಳ ಹಾಗೂ ವಿಸರ್ಜನಾ ಮೆರವಣೆಗೆ ಸಂಚರಿಸುವ ಮಾರ್ಗ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್

ಹೊನ್ನಾವರ: ತಾಲೂಕಿನ ಸಾರ್ವಜನಿಕ ಗಣೇಶೊತ್ಸವ ಪ್ರತಿಷ್ಟಾಪನಾ ಸ್ಥಳ ಹಾಗೂ ವಿಸರ್ಜನಾ ಮೆರವಣೆಗೆ ಸಂಚರಿಸುವ ಮಾರ್ಗ ಮತ್ತು ಬಂದರ್ ಪ್ರದೇಶದ ವಿಸರ್ಜನಾ ಸ್ಥಳವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಕರ್ಕಿ, ಕರ್ಕಿನಾಕಾ, ವಿಶ್ವಹಿಂದು ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿದ ಟಪ್ಪರ್ ಹಾಲ್ ಗಣೇಶೊತ್ಸವ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಸಮಿತಿಯವರಿಗೆ ವಿಸರ್ಜನೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಪಟ್ಟಣದ ಬಜಾರ್ ರಸ್ತೆ ಮೂಲಕ ಗಣೇಶೋತ್ಸವ ಮೆರವಣಿಗೆಯ ಮಾರ್ಗವನ್ನು ಪರಿಶೀಲಿಸಿ ವಿದ್ಯುತ್ ತಂತಿ ಬಗ್ಗೆ ಜಾಗೃತೆ ವಹಿಸುವಂತೆ ಸೂಚಿಸಿದರು. ವಿಸರ್ಜನೆಯ ಸ್ಥಳ ಪರಿಶೀಲಿಸಿ ಸೂಕ್ತ ಬೆಳಕು ಹಾಗೂ ಜನಸಂದಣೆ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳು, ದೋಣಿ ಮೂಲಕ ಸ್ವಯಂಸೇವಕರು, ಅಗ್ನಿಶಾಮಕ ಇಲಾಖೆಯವರು ತುರ್ತು ಸಂದರ್ಭದಲ್ಲಿ ಎದುರಿಸಲು ಸಜ್ಜಾಗಿರುವಂತೆ ಸೂಚಿಸಿದರು. ಪೊಲೀಸ್ ಅಧಿಕಾರಿಗಳಿಗೆ ಭದ್ರತೆಯ ಬಗ್ಗೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್.ಪಿ ಕೃಷ್ಣಮೂರ್ತಿ, ಸಿಪಿಐ ಸಿದ್ದರಾಮೇಶ್ವರ, ಪಿಎಸೈ ರಾಜಶೇಖರ, ಸಿಬ್ಬಂದಿಗಳು ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!