
ಮುರ್ಡೇಶ್ವರ: ಶಿಕ್ಷಕರನ್ನು ಸಮಾಜವು ಅತ್ಯಂತ ಗೌರವದಿಂದ ಕಾಣುತ್ತಿದ್ದು ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಒಳಪಡುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿಯಾಗಿದೆ ಎಂದು ಮುರ್ಡೇಶ್ವರ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಕಿರಣ ಎಸ್ ಕಾಯ್ಕಿಣಿಯವರು ಹೇಳಿದರು. ಅವರು ಮುರ್ಡೇಶ್ವರದ ಪ್ರಾರ್ಥನಾ ಹೊಟೇಲ್ಲ್ಲಿ ನಡೆದ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸುವ ಗುರು ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈವೇಳೆ ಅವರು ತಮ್ಮ ಬಾಲ್ಯದ ಶಿಕ್ಷಕರನ್ನು ಸ್ಮರಿಸಿಕೊಂಡು ಶಿಕ್ಷೆಯಿಂದ ಹೊರತಾದ ಇತ್ತೀಚಿನ ಶಿಕ್ಷಣದಿಂದ ಮಕ್ಕಳಲ್ಲಿ ಶಿಕ್ಷಕರ ಹಾಗೂ ಶಿಕ್ಷಕಣದ ಕುರಿತು ಭಯ ಕಡಿಮೆ ಆಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಲಯನ್ಸ್ ಕ್ಲಬ್ ಮುರ್ಡೇಶ್ವರವು ಪ್ರತಿ ವರ್ಷ ಭಟ್ಕಳ ತಾಲೂಕಿನಲ್ಲಿ ಸೇವೆಸಲ್ಲಿಸಿ ನಿವೃತ್ತರಾಗುವ ಶಿಕ್ಷಕರನ್ನು ಗುರುಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗೌರವಿಸುತ್ತಾ ಬಂದಿರುವುದನ್ನು ಗಮನಿಸಬಹುದಾಗಿದೆ. ಈವೇಳೆ ನಿವೃತ್ತಶಿಕ್ಷಕರಾದ ಮಂಜುನಾಥ ಹೆಗಡೆ, ರೇವತಿ ಹಾವಳಿಮನೆ, ಶಿವರಾಮಮೊಗೇರ, ಜಮಾಲ್ ಖಾನ್, ಗಜಾನನ ನಾಯ್ಕ, ಎಸ್.ಆರ್ ಗೊಂಡ, ಗಣಪತಿ ಹೆಗಡೆ, ಪದ್ಮನಾಭ ಹೆಬ್ಬಾರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸುಮನಾ ಕೆರವರನ್ನುಹಾಗೂ ಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ತೆರ್ನಮಕ್ಕಿಯ ಕಲಾವಿದ ರಾಘವೇಂದ್ರ ಆಚಾರಿಯವರನ್ನುಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರು, ಜಿಲ್ಲಾಮಟ್ಟದ ಪ್ರಸಸ್ತಿ ಪಡೆದ ಶಿಕ್ಷಕರು, ಕಲಾವಿದ ರಾಘವೇಂದ್ರ ಆಚಾರಿಯವರು ಮಾತನಾಡಿ ಲಯನ್ಸ್ ಕ್ಲಬ್ನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ನಾಗೇಶ ಮಡಿವಾಳರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷರಾದ ಎಂ.ವಿ ಹೆಗಡೆಯವರು ವಂದಿಸಿದರು. ಕೆ.ಬಿ ಹೆಗಡೆಯವರು ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
More Stories
ಮಗ್ದೂಮ್ ಕಾಲನಿಯ ಅರಣ್ಯ ಇಲಾಖೆಯ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ರಾಶಿ ಮೂಳೆ ಪತ್ತೆ ಸ್ಥಳೀಯರಲ್ಲಿ ಆಕ್ರೋಶ
ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ಭಟ್ಕಳ. ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ.ತಾಲೂಕಾ ವೀರಾಗ್ರಣಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮೀನುಗಾರಿಕೆಯಲ್ಲಿ ಯುವ ಮೀನುಗಾರನ ಅಕಾಲಿಕ ಸಾವು