October 6, 2025

ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾದ ಮೊದಲ ವರ್ಷದ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಮುರ್ಡೇಶ್ವರ ; ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರೊ. ಕೆ ಮರಿಸ್ವಾಮಿ ಉಪ ಪ್ರಾಚಾರ್ಯರು ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜ್ ಮುರುಡೇಶ್ವರ ರವರು ಮಾತನಾಡಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ, ಕೌಶಲ್ಯ ಅಭಿವೃದ್ಧಿಯನ್ನು ಹೊಂದಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದಾಗ ಮಾತ್ರ ಸಾಧನೆ ಮಾಡಬಹುದು ಎಂದರು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಶಾಂತ ಶ್ರೀಹರಿದಾಸ್ ರವರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಾಲೇಜಿನ ಶಿಸ್ತು, ಮತ್ತು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸ್ಪರ್ಧಾತ್ಮಕವಾಗಿ ಹೆಚ್ಚು ತೊಡಗಿಸಿ ಕೊಂಡಾಗ ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ಇರಲು ಸಾಧ್ಯ ಎಂದರು.


ವೇದಿಕೆಯಲ್ಲಿ ಸಾಂಸ್ಕೃತಿಕ ಸಂಚಾಲಕರಾದ ಗಣಪತಿ ಕಾಯ್ಕಿಣಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಗಣೇಶ ನಾಯ್ಕ್, ಸಾಂಸ್ಕೃತಿಕ ಸಹ ಸಂಚಾಲಕರಾದ ಮಮತಾ ಮರಾಠಿ ಹಾಜರಿದ್ದರು
ಕು. ವೇದ ಆಚಾರ್ಯ ಎಲ್ಲರನ್ನು ಸ್ವಾಗತಿಸಿ. ಕು.ರಕ್ಷಿತಾ ಕುಂಬಾರ್ ಎಲ್ಲರನ್ನ ವಂದಿಸಿದರು, ಕು. ಅರ್ಚನಾ ನಾಯ್ಕ್ ಕಾರ್ಯಕ್ರಮ ನಿರೂಪಣೆ ಮಾಡಿ, ಕು. ಸುಶ್ಮಿತಾ ಪ್ರಾರ್ಥನೆ ಹಾಡಿದಳು, ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಯಿತು.

About The Author

error: Content is protected !!