October 5, 2025

ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ

ಕಾರ್ಕಳ : ಪುರಸಭೆ ವ್ಯಾಪ್ತಿ ರಸ್ತೆಗಳೆಲ್ಲ ಹೊಂಡ ಮಯವಾಗಿದ್ದು ರಸ್ತೆ ದುರಸ್ತಿಗೆ ಮೀನ ಮೇಷ ಎಣಿಸುತ್ತಿರುವ ಬಗ್ಗೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶುಭದ ರಾವ್ ಕಾರ್ಕಳ ಪೇಟೆಯಲ್ಲಿ ರಸ್ತೆ ಗುಂಡಿಗಳಿAದ ಜನರಿಗೆ ಓಡಾಟಕ್ಕೆ ಸಂಕಷ್ಟ ಎದುರಾಗಿದೆ ಹಲವು ಬಾರಿ ಅಪಘಾತಗಳು ಉಂಟಾಗಿದೆ ಈ ಬಗ್ಗೆ ತಿಳಿಸಿದರು ಯಾವುದೇ ಈ ಸಮಸ್ಯೆ ಬಗ್ಗೆ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೇ ಅವರು ಮಾತನಾಡಿ ರಸ್ತೆ ಗುಂಡಿಗಳಿAದ ಮಂಗಳೂರಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ಇಂತಹ ಘಟನೆ ಕಾರ್ಕಳದಲ್ಲಿ ಮರುಕಳಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ತೆಲ್ಲರು ರಸ್ತೆ ಮುಖ್ಯ ರಸ್ತೆ ಗುಂಡಿಗಳ ಅವ್ಯವಸ್ಥೆ ಬಗ್ಗೆ ಪುರಸಭೆ ಮೌನವಹಿಸಿದೆ ಎಂದು ಹೇಳಿದರು. 

ಸದಸ್ಯರಾದ ಶುಭದರಾವ್ ಸುಮಾ ಕೇಶವ ರೆಹಮತ್, ವಿವೇಕಾನಂದ ಶೆಣೈ , ಹರೀಶ ಸೋಮನಾಥ ನೀತಾ ಆಚಾರ್ಯ,
ಶುಭ ದೇವಾಡಿಗ ಅವರು ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಬೇಕು ಎಂದು ಅಗ್ರಹಿಸಿದರು. ಅಮೃತ ಕುಡಿಯುವ ನೀರಿನ ಯೋಜನೆ ಕಾಮಗಾರಿಕೆ ಕಳಪೆ ಮಟ್ಟದ್ದು ಹಾಗೂ ಅವೈಜ್ಞಾನಿಕ ವಾಗಿ ನಡೆಯುತ್ತಿರುವುದು ರಸ್ತೆ ಸಮಸ್ಯೆಗೆ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಗುಂಡಿ ಬಿದ್ದಿರುವ ರಸ್ತೆಗಳಿಗೆ ವೇಟ್ ಮಿಕ್ಸ್ ಹಾಕುದಾಗಿ ಅಧ್ಯಕ್ಷರು ಹೇಳಿದಾಗ ಈಗಾಗಲೇ ಹಲವು ಬಾರಿ ವೇಟ್ ಮಿಕ್ಸ್ ಹಾಕಿದರು ಪ್ರಯೋಜನವಾಗಲಿಲ್ಲ ವೇಟ್ ಮಿಕ್ಸ್ ಕೂಡ ಕಳಪೆ ಮಟ್ಟದ್ದಾಗಿದೆ ಅದರಲ್ಲಿರುವ ಜ ಲ್ಲಿ ತುಂಡುಗಳು  ತುಂಬಾ ಅಪಾಯ ಮಟ್ಟದಾಗಿದೆ ಎಂದು ಶುಭದ ರಾವ್ ಇನ್ನಿತರ  ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರನ್ನು ರಸ್ತೆ ದುರಸ್ತಿ ಬಗ್ಗೆ ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ ಪುರಸಭೆ ಯಲ್ಲಿ ನಡೆಯಿತು. ಪುರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ರಸ್ತೆ ಗುಂಡಿಗಳನ್ನು ಪರಿಶೀಲಿಸಿ ಸಮರ್ಪಕ ದುರಸ್ತಿ ಕೈಗೊಳ್ಳುವ ಬಗ್ಗೆ ಆಶ್ವಾಸನೆ ನೀಡಲಾಯಿತು.
ಭಾವನಾ ಟಿವಿಗಾಗಿ ಅರುಣ ಭಟ್ ಕಾರ್ಕಳ

About The Author

error: Content is protected !!