ಕಾರ್ಕಳ : ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸುವರ್ಣ ಭೂಮಿ ಶಾಸ್ತಾವು ಪೆರ್ವಾಜೆ ಇಲ್ಲಿ 13ನೆಯ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ದಿನಾಂಕ 14 ಶನಿವಾರ ದಂದು ಬೆಳಿಗ್ಗೆ ಶ್ರೀ ಸಾಯಿಬಾಬಾ ರವರಿಗೆ ಕಲಶಾಭಿಷೇಕ ಮತ್ತು ಭಜನಾ ಕಾರ್ಯಕ್ರಮ ನಂತರ ಮದ್ಯಾಹ್ನ ಮಹಾ ಪೂಜೆ ಅನ್ನ ಸಂತರ್ಪಣೆ, ವಿವಿಧ ಭಜನಾ ಮಂಡಳಿಗಳ ವತಿಯಿಂದ ಭಜನಾ ಸೇವೆ ನಿರಂತರವಾಗಿ ನಡೆಯಿತು ರಾತ್ರಿ ಮಹಾ ಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ಗೌರವ ಅಧ್ಯಕ್ಷರು ಕೆ.ಕಮಲಾಕ್ಷ ಕಾಮತ್ , ಆಡಳಿತ ಮೊಕ್ತೇಸರ ಶ್ರೀಮತಿ ಲಲಿತಾ ಸುವರ್ಣ ಅಭಿಷೇಕ್ ಸುವರ್ಣ, ಪ್ರಧಾನ ಅರ್ಚಕರು ಲಕ್ಷ್ಮೀ ನಾರಾಯಣ ಭಟ್ ,ವ್ಯವಸ್ಥಾಪಕರು ಪ್ರಫುಲ್ಲ ಶೆಟ್ಟಿ. ಹಾಗು ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಸೇರಿದ್ದರು.
ವರದಿ : ಅರುಣ ಭಟ್ ಕಾರ್ಕಳ

More Stories
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ವೈಭವದ ಜಾತ್ರಾ ಮಹೋತ್ಸವ – ವ್ಯಾಘ್ರ ಚಾಮುಂಡಿ ದೈವದ ಭಂಡಾರ ಮೆರವಣಿಗೆ
ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಜಾತ್ರಾ ಮಹೋತ್ಸವ
ಕಾರ್ಕಳದಲ್ಲಿ ಸಿಐಟಿಯು ನೇತ್ರತ್ವದಲ್ಲಿ ಮೇ ದಿನಾಚರಣೆ ಆಚರಣೆ