ಭಟ್ಕಳ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬೋಟ್‌ನಲ್ಲೇ ಬಿದ್ದ ಪರಿಣಾಮ ಮೀನುಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ನಾಗೇಶ (48) ಮಹಾಬಲೇಶ್ವರ ಅಂಬಿಗ, ಬೇಲೆಹಿತ್ತ, ಕುಮಟಾ, ಗೋಕರ್ಣ ಎಂದು ಗುರುತಿಸಲಾಗಿದೆ.
ಈತನು ವೃತ್ತಿಯಿಂದ ಮೀನುಗಾರನಾಗಿದ್ದ. ಜಲವಿಜಯ ಪರ್ಷಿಯನ್ ಬೋಟ್ ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗಾಗಿ ತೆರಳಿದ್ದು ಸುಮಾರು 7-8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಕಾರ್ಯ ನಡೆಯುತ್ತಿರುವಾಗ ನಾಗೇಶ ಅಂಬಿಗ ಕುಸಿದು ಬೋಟ್‌ನಲ್ಲೇ ಬಿದ್ದಿದ್ದಾನೆ. ತಕ್ಷಣ ಸಹೋದ್ಯೋಗಿಗಳು ಆತನನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ತರುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ದೃಢ ಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಿಣ ಠಾಣೆಯಲ್ಲಿ ಮಂಜುನಾಥ ಮಹಾಬಲೇಶ್ವರ ಅಂಬಿಗ ದೂರು ನೀಡಿದ್ದಾರೆ.
About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ