March 2, 2026

ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ

ಭಟ್ಕಳ: ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಈ ಅಭಿಯಾನದಲ್ಲಿ ಬ್ರಹ್ಮಾವರದ ಸೆಂಟ್ ಮೇರಿ ಸಿರಿಯನ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೋಂಕಣ್ ರೈಲ್ವೆ ನಿಗಮದ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದರು. ಒಟ್ಟು 72 ವಿದ್ಯಾರ್ಥಿಗಳು, 3 ಬೋಧಕ ವರ್ಗದ ಸದಸ್ಯರು ಮತ್ತು 20 ರೈಲ್ವೆ ಸಿಬ್ಬಂದಿ ಪಾಲ್ಗೊಂಡು ನಿಲ್ದಾಣದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 300 ಕೆ.ಜಿ. ಕಸವನ್ನು ಸಂಗ್ರಹಿಸಿದರು.

ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಹಾಗೂ ನಿಲ್ದಾಣವನ್ನು ಹಸಿರು ಸ್ವಚ್ಛವಾಗಿಡಲು ಕೋಂಕಣ್ ರೈಲ್ವೆ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾಗಿದೆ.

About The Author

error: Content is protected !!