ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಜಗದೀಶ (ತಂದೆ ದೇವರಾಯ ಗೊಂಡ), ಹೊಸಗದ್ದೆ ಹಡಿಲ್ ಅಬ್ಬತಿ ಮತ್ತು ಜಗದೀಶ ನಾಯ್ಕ, ಭಟ್ಕಳ ಎಂಬವರು ಪರಸ್ಪರ ಸಹಯೋಗದಲ್ಲಿ ಛಾಯಾ ಲಾಡ್ಜ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಂತು, ಓ.ಸಿ ಮಟಕಾ ಅಂಕೆ ಸಂಖ್ಯೆಗಳ ಆಧಾರದ ಮೇಲೆ ಜನರಿಂದ ಹಣವನ್ನು ಪಡೆದು ಲಾಭಕ್ಕಾಗಿ ಪಂಥವನ್ನಾಗಿ ಕಟ್ಟಿಕೊಂಡು ಜೂಗಾರಾಟ ನಡೆಸುತ್ತಿದ್ದರು.
ನಗರ ಠಾಣೆಯ ಪಿಎಸ್‌ಐ ನವಿನ್ ನಾಯ್ಕ ಹಾಗೂ ತಂಡ ದಾಳಿ ನಡೆಸಿದ್ದು, ಆರೋಪಿಗಳ ವಶದಿಂದ ರೂ 8,420 ನಗದು ಹಾಗೂ ಓ.ಸಿ ಜೂಗಾರಾಟದ ಉಪಕರಣಗಳು ವಶಪಡಿಸಲಾಗಿದೆ. ಆರೋಪಿಗಳಲ್ಲಿ ಆರೋಪಿ 1 ಸ್ಥಳದಲ್ಲೇ ಬಂಧಿಸಲಾಗಿದೆ, ಇವರುಗಳ ಮೇಲೂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ