ಭಟ್ಕಳ: ಮಂಗಳೂರುದಿAದ ಗೋವಾ ತಿವಿಂಗೆ ಪ್ರಯಾಣಿಸುತ್ತಿದ್ದ ಕುಟುಂಬದೊಬ್ಬರಿಗೆ ರೈಲಿನಲ್ಲಿ ಕಳ್ಳತನದ ಘಟನೆ ಸಂಭವಿಸಿದೆ.
ಸುದರ್ಶನ್ ಭಟ್ಟರು ಉಧ್ನಾ ವಿಶೇಷ ರೈಲು-09058 ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ, ಮಂಗಳೂರು ಮತ್ತು ಕುಮಟಾ ನಿಲ್ದಾಣಗಳ ನಡುವೆ, ಯಾರೋ ಕಳ್ಳರು ಅವರ ತಾಯಿಯ ವೆನಿಟಿ ಬ್ಯಾಗ್ ಕಳವು ಮಾಡಿಕೊಂಡಿದ್ದಾರೆ. ಬ್ಯಾಗಿನಲ್ಲಿದ್ದವು 63 ಗ್ರಾಂ ಚಿನ್ನದ ಒಡವೆ (ರೂ 3,60,000), ರೂ 30,000 ನಗದು, ಮತ್ತು ರೂ 25,000 ಮೌಲ್ಯದ ಎರಡು ಮೊಬೈಲ್‌ಗಳು, ಒಟ್ಟು ರೂ 4,15,000 ಮೌಲ್ಯದ ವಸ್ತು ಕಳವುಗೊಂಡಿದೆ.

ಫಿರ್ಯಾದಿ ಸುದರ್ಶನ್ ತಂದೆ ಸೂರ್ಯನಾರಾಯಣ ಭಟ್ಟ, ಮೂಲತಃ ಪುತ್ತೂರು ತಾಲ್ಲೂಕಿನ ಅಂಜೆಕಾವು ಇವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

More Stories
ಎರಡು ತಿಂಗಳ ವಿರಾಮದ ಬಳಿಕ ಮೀನುಗಾರಿಕೆಗೆ ಮುಹೂರ್ತ: ಭಟ್ಕಳ ಬಂದರಿನಲ್ಲಿ ಭಕ್ತಿಭಾವದ ಸಮುದ್ರ ಪೂಜೆ
ಗಲಾಟೆ ತಡೆಯಲು ಹೋದ ಪೊಲೀಸರ ಮೇಲೆಯೇ ಚಾಕು ದಾಳಿ! ಇಬ್ಬರು ಸಿಬ್ಬಂದಿಗೆ ಗಾಯ
ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ B.Sc. ಕ್ರಿಮಿನಾಲಜಿ & ಫೋರೆನ್ಸಿಕ್ ಸೈನ್ಸ್ ಕೋರ್ಸ್ಗೆ ಚಾಲನೆ: ಎಸ್ಪಿ ದೀಪನ್ ಎಂ.ಎನ್. ಉದ್ಘಾಟನೆ