November 19, 2025

ಭಟ್ಕಳ: ಮಂಗಳೂರು ಗೋವಾ ರೈಲಿನಲ್ಲಿ ಚಿನ್ನ, ನಗದು ಮತ್ತು ಮೊಬೈಲ್ ಕಳ್ಳತನ

ಭಟ್ಕಳ: ಮಂಗಳೂರುದಿAದ ಗೋವಾ ತಿವಿಂಗೆ ಪ್ರಯಾಣಿಸುತ್ತಿದ್ದ ಕುಟುಂಬದೊಬ್ಬರಿಗೆ ರೈಲಿನಲ್ಲಿ ಕಳ್ಳತನದ ಘಟನೆ ಸಂಭವಿಸಿದೆ.
ಸುದರ್ಶನ್ ಭಟ್ಟರು ಉಧ್ನಾ ವಿಶೇಷ ರೈಲು-09058 ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ, ಮಂಗಳೂರು ಮತ್ತು ಕುಮಟಾ ನಿಲ್ದಾಣಗಳ ನಡುವೆ, ಯಾರೋ ಕಳ್ಳರು ಅವರ ತಾಯಿಯ ವೆನಿಟಿ ಬ್ಯಾಗ್ ಕಳವು ಮಾಡಿಕೊಂಡಿದ್ದಾರೆ. ಬ್ಯಾಗಿನಲ್ಲಿದ್ದವು 63 ಗ್ರಾಂ ಚಿನ್ನದ ಒಡವೆ (ರೂ 3,60,000), ರೂ 30,000 ನಗದು, ಮತ್ತು ರೂ 25,000 ಮೌಲ್ಯದ ಎರಡು ಮೊಬೈಲ್‌ಗಳು, ಒಟ್ಟು ರೂ 4,15,000 ಮೌಲ್ಯದ ವಸ್ತು ಕಳವುಗೊಂಡಿದೆ.

ಫಿರ್ಯಾದಿ ಸುದರ್ಶನ್ ತಂದೆ ಸೂರ್ಯನಾರಾಯಣ ಭಟ್ಟ, ಮೂಲತಃ ಪುತ್ತೂರು ತಾಲ್ಲೂಕಿನ ಅಂಜೆಕಾವು ಇವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

About The Author

error: Content is protected !!