November 19, 2025

ವಿಶ್ವ ದೃಷ್ಟಿ ದಿನಾಚರಣೆ…..ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರ

ಶಿರಸಿ : ಇಂದು 26ನೇ ವಿಶ್ವ ದೃಷ್ಟಿ ದಿನದ ಅಂಗವಾಗಿ ಶಿರಸಿ ತಾಲೂಕಿನ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಶಿರಸಿ, ಗ್ರೀನ್ ಕೇರ್ (ರಿ.) ಶಿರಸಿ, ಸಂಕಲ್ಪ ಟ್ರಸ್ಟ್ ಶಿರಸಿ ಮತ್ತು ವಿಶ್ವೋದಯ ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಬನವಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾಗಿರುವ ಡಾ. ಜಯಶ್ರೀ ಹೆಗಡೆಯವರು ವಹಿಸಿದ್ದು ಉದ್ಘಾಟಕರಾಗಿ ಶಿರಸಿ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಮಧುಕರ್ ಪಾಟೀಲ್ ಮತ್ತು ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಶ್ರೀ ಡಾ. ಎ. ಜಿ. ವಸ್ತ್ರದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಕಾರ್ಯಕ್ರಮದ ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಆರ್.ಎಂ. ಸಂಕಲ್ಪ ಟ್ರಸ್ಟಿನ್ ಅಧ್ಯಕ್ಷರಾದ ಶ್ರೀ ಕುಮಾರ್ ಪಟಗಾರ, ವಿಶ್ವೋದಯ ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಹಲೇಶ್ ಕೆರೋಡಿ, ಮತ್ತು ರೋಟರಿ ಆಸ್ಪತ್ರೆಯ ಶಿಬಿರದ ಸಂಘಟಕರಾದ ಗಿರೀಶ್ ಧಾರೇಶ್ವರ್, ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಉದಯ್ ನಾಯ್ಕ, ಶಿರಸಿ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ವೀರಯ್ಯ ಹಿರೇಮಠ್, ಹಳೆ ಮಠ ಬನವಾಸಿಯ ಮ.ನಿ. ಪ್ರ ನಾಗಭೂಷಣ ಮಹಾಸ್ವಾಮಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು, ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಎ. ಜಿ. ವಸ್ತ್ರದ ಅವರು ಮಾತನಾಡಿ ವಿಶ್ವ ದೃಷ್ಟಿ ದಿನ ಮತ್ತು ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಶಿಬಿರದ ಸಂಘಟಕರಾದ ಗಿರೀಶ್ ಧಾರೇಶ್ವರ್ ಅವರು ಶಿಬಿರದ ಸಂಪೂರ್ಣ ಮಾಹಿತಿಯನ್ನು ನೀಡಿದರು, ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಆರ್. ಎಂ. ಮಾತನಾಡಿ ಈ ಶಿಬಿರದ ಲಾಭವನ್ನು ನಿಜವಾದ ಶಿಬಿರಾರ್ಥಿಗಳಿಗೆ ತಲುಪುವಂತೆ ನಾವು ಮಾಡಬೇಕು ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಉದ್ಘಾಟರಾದ ಡಾ. ಮದುಕರ್ ಪಾಟೀಲ್ ಅವರು ಕಣ್ಣಿನ ಸೂಕ್ಷ್ಮತೆ , ದೃಷ್ಟಿಯ ಬಗ್ಗೆ ಹಾಗೂ ಮುಂಬರುವ ದೀಪಾವಳಿ ಹಬ್ಬದಲ್ಲಿ ಕಣ್ಣಿನ ಬಗ್ಗೆ ತೆಗೆದುಕೊಳ್ಳುವ ಮುಂಜಾಗ್ರತೆ ಬಗ್ಗೆ ತಿಳಿಸಿದರು.

ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಸುರಕ್ಷಿತಾ ಅಧಿಕಾರಿ ಶ್ರೀಮತಿ ಕಲಾವತಿ ಎಚ್ ನಾಯ್ಕ, ಆಶಾ ಕಾರ್ಯಕರ್ತರು ಮತ್ತು ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು, ಗ್ರೀನ್ ಕೇರ್ ಸಂಸ್ಥೆಯ ಕಚೇರಿ ಕಾರ್ಯನಿರ್ವಾಹಕರಾದ ಶ್ರೀಮತಿ ಅಪ್ಸಾನಾ ಉಪಸ್ಥಿತರಿದ್ದರು. ಶಿಬಿರದಲ್ಲಿ 170 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 98 ಶಿಬಿರಾರ್ಥಿ ಗಳನ್ನು ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಲು ರೋಟರಿ ಆಸ್ಪತ್ರೆಗೆ ಆಸ್ಪತ್ರೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಯಿತು. ಶಿರಸಿಯ ರೋಟರಿ ಆಸ್ಪತ್ರೆಯಲ್ಲಿ ಖ್ಯಾತ ನೇತೃ ತಜ್ಞರಾದ ಡಾ|| ಆದಿತ್ಯ ಫಡ್ನಿಸ್ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ಮಾರುತಿ ಬಾರ್ಕಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

About The Author

error: Content is protected !!