November 19, 2025

ಜಮಖಂಡಿಯ 102 ವರ್ಷದ ಆಂಜನೇಯ ಮೂರ್ತಿ ಮುರ್ಡೇಶ್ವರ ಸಮುದ್ರದಲ್ಲಿ ವಿಸರ್ಜನೆ

ಭಟ್ಕಳ: ಜಮಖಂಡಿಯ ಹಳೆಯ ಆಂಜನೇಯ ದೇವಸ್ಥಾನದ ಮರುಪ್ರತಿಷ್ಠಾಪನೆಯ ಪ್ರಯುಕ್ತ, 102 ವರ್ಷಗಳಿಂದ ಭಕ್ತರ ಆರಾಧನೆಯ ಕೇಂದ್ರವಾಗಿದ್ದ ಆಂಜನೇಯ ಮೂರ್ತಿಯನ್ನು ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು.

ಮೂರ್ತಿಯನ್ನು ಮೊದಲು ವಿಶೇಷ ಪೂಜೆ ಸಲ್ಲಿಸಿ ಮುರ್ಡೇಶ್ವರಕ್ಕೆ ಕರೆತರಲಾಯಿತು. ಬಳಿಕ ನೇತ್ರಾಣಿ ಗಣೇಶ್ ಅವರ ಮಾಲಿಕತ್ವದ ಓಶಿಯನ್ ಅಡ್ವೆಂಚರ್ ಬೋಟಿನಲ್ಲಿ ಭಕ್ತರ ಸಮಕ್ಷಮ ನಡು ಸಮುದ್ರಕ್ಕೆ ತೆರಳಿ ಪವಿತ್ರ ಜಲದಲ್ಲಿ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಲಾಯಿತು. ನಂತರ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಧರ್ಮಸ್ಥರು, ಸ್ಥಳೀಯ ಭಕ್ತರು ಸಹಯೋಗದೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿತು. ಭಕ್ತರ ಭಾವನಾತ್ಮಕ ಹಾಜರಾತಿ ಮಧ್ಯೆ ಹಳೆಯ ಆಂಜನೇಯ ಮೂರ್ತಿಗೆ ಗೌರವಪೂರ್ಣ ವಿದಾಯ ನೀಡಲಾಯಿತು.

About The Author

error: Content is protected !!