ಮುರ್ಡೇಶ್ವರ: ಭಟ್ಕಳ: ಮುರ್ಡೇಶ್ವರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.




ಬಂಧಿತನನ್ನು ಮಾದೇವ (ತಂದೆ ಈರಯ್ಯ ದೇವಾಡಿಗ), ಕೋಕ್ತಿ ಬೇಂಗ್ರೆ 02 ನಿವಾಸಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಕಾಯ್ಕಿಣಿ ಗ್ರಾಮದ ದೇವಿಕಾನ ರಸ್ತೆಯಲ್ಲಿದ್ದ ಸಾರ್ವಜನಿಕ ಸ್ಥಳದಲ್ಲಿ ಹಣ ಪಡೆದು, ಮಟ್ಕಾ ಜೂಜಾಟ ನಡೆಸುತ್ತಿದ್ದನು. ಮಾಹಿತಿ ದೊರಕುತ್ತಿದ್ದಂತೆ ಮುರ್ಡೇಶ್ವರ ಠಾಣೆಯ ಪಿಎಸ್‌ಐ ಹನುಮಂತ ಬಿರಾದಾರ ಅವರ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ..

ಬAಧಿತನ ಬಳಿಯಿಂದ ರೂ.960 ನಗದು ಮತ್ತು ಜೂಜಾಟಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

More Stories
ಬ್ಯಾಂಕ್ ಎಟಿಎಂ ಭದ್ರತೆ: ಮುರುಡೇಶ್ವರ ಠಾಣೆಯಲ್ಲಿ ಮುನ್ನೆಚ್ಚರಿಕಾ ಸಭೆ
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಪ್ರವಾಸಿಗ ಸಾವು
ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.