ಭಟ್ಕಳ/ಮುರ್ಡೇಶ್ವರ: ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಯುವಕನಿಗೆ ನಾಲ್ವರು ಮಂಗಳಮುಖಿಯರು ತಡೆದು ಅಸಭ್ಯವಾಗಿ ವರ್ತಿಸಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತು ಪರಾರಿಯಾದ ಘಟನೆ ಮುರ್ಡೇಶ್ವರ ರೈಲ್ವೆ ನಿಲ್ದಾಣದ ಹತ್ತಿರ ಭಾನುವಾರ ರಾತ್ರಿ ನಡೆದಿದೆ.

ಮಾವಳ್ಳಿ 2, ಗುಮ್ಮನಕ್ಕಲ್ ನಿವಾಸಿ ಆರುಣ ಕುಮಾರ ಭಾಸ್ಕರ ನಾಯ್ಕ ಎಂಬವರು ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಾತ್ರಿ ಪೆಟ್ರೋಲ್ ತುಂಬಿಸಿಕೊAಡು ಸ್ಕೂಟರ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಮೂಲಕ ರೈಲ್ವೆ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಕೈ ಮಾಡಿ ವಾಹನ ನಿಲ್ಲಿಸಿದರು. ಮಾತನಾಡುವ ವೇಳೆ ರೈಲ್ವೆ ನಿಲ್ದಾಣದ ದಿಕ್ಕಿನಿಂದ ಮತ್ತಿಬ್ಬರು ಬಂದು ಯುವಕನ ಮೇಲೆ ಕೈ ಹಾಕಿ ಮುತ್ತು ಕೊಡಲು ಯತ್ನಿಸಿದರೆಂದು ದೂರು ಹೇಳುತ್ತದೆ.
ಯುವಕ ವಿರೋಧ ವ್ಯಕ್ತಪಡಿಸಿದಾಗ ನಿನ್ನ ಹತ್ತಿರ ಎಷ್ಟು ಹಣ ಇದೆ? ಎಂದು ಕೇಳಿ, ಹಣ ಇಲ್ಲವೆಂದ ಬಳಿಕ ನಾಲ್ವರೂ ಸೇರಿ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದರೆಂದು ಹೇಳಲಾಗಿದೆ. ಈ ವೇಳೆ ಅವರಲ್ಲಿ ಒಬ್ಬಳು ಯುವಕನ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತು ರೈಲ್ವೆ ನಿಲ್ದಾಣದ ದಿಕ್ಕಿಗೆ ಓಡಿ ಹೋಗಿದ್ದಾಳೆ.
ಘಟನೆ ಬಳಿಕ ಮುರ್ಡೇಶ್ವರ ಪಿಎಸೈ ಲೋಕನಾಥ ರಾಥೋಡ ನೇತೃತ್ವದ ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಸಿಸಿಟಿವಿ ದೃಶ್ಯಾವಳಿ ಹಾಗೂ ಮಾಹಿತಿ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬAಧಿತರನ್ನು ಅದ್ನಾನ್ ಮೆಹದಿ (ತಂದೆ ರಸೂಲ್ ಖಾನ್, ಮಳುವಳ್ಳಿ ಮಂಡ್ಯ), ಅಜರ್ ಖಾನ್ (ತಂದೆ ಆಜಂ ಖಾನ್, ಮೈಸೂರು), ಮಹಮದ್ ಉಸ್ಮಾನ (ತಂದೆ ಅಬ್ದುಲ್ ಅಜೀಜ್, ಮೈಸೂರು) ಹಾಗೂ ಮದನ್ ಪಳನಿ (ತಂದೆ ಪಳಿನಿ, ಕೃಷ್ಣಗಿರಿ ತಮಿಳುನಾಡು) ಎಂದು ಪೊಲೀಸರು ತಿಳಿಸಿದ್ದಾರೆ.
ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸ್ಥಳೀಯ ಮಂಗಳಮುಖಿಯರ ಆಕ್ರೋಶ ಕೆಲವರ ಕೃತ್ಯದಿಂದ ಎಲ್ಲರಿಗೂ ಕಳಂಕ
ಕೆಲವರ ಕೃತ್ಯದಿಂದ ಎಲ್ಲರಿಗೂ ಕಳಂಕ ತಗುಲುತ್ತಿದೆ, ಇಂತಹವರ ವಿರುದ್ಧ ಕ್ರಮ ಅಗತ್ಯ ಎಂದು ಅಂತರAಗ ಸಂಘಟನೆಯ ಉಪಾಧ್ಯಕ್ಷೆ ಆಯಿಷ ಮಂಗಳಮುಖಿ ವಿಷಾದ ವ್ಯಕ್ತಪಡಿಸಿದ್ದಾರೆ.

More Stories
ಬ್ಯಾಂಕ್ ಎಟಿಎಂ ಭದ್ರತೆ: ಮುರುಡೇಶ್ವರ ಠಾಣೆಯಲ್ಲಿ ಮುನ್ನೆಚ್ಚರಿಕಾ ಸಭೆ
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಪ್ರವಾಸಿಗ ಸಾವು
ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.