August 29, 2025

ಶಿರಾಲಿ ಅರಣ್ಯದಲ್ಲಿ ಕೋಳಿ ಅಂಕ ಆಟದ ಮೇಲೆ ದಾಳಿ: 15 ಮಂದಿ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಹುಲ್ಲುಕ್ಕಿ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ನೇತೃತ್ವದಲ್ಲಿ ಪೊಲೀಸ್ ತಂಡವು ದಾಳಿ ನಡೆಸಿದೆ.

ಕಾರ್ಯಾಚರಣೆಯ ವೇಳೆ ನಾರಾಯಣ ಕುಪ್ಪಯ್ಯ ನಾಯ್ಕ (ಸಬ್ಬತ್ತಿ), ಗೋಪಾಲ ನಾರಾಯಣ ನಾಯ್ಕ (ಯಲ್ವಡಿಕವೂರು) ಮತ್ತು ರಾಮಕೃಷ್ಣ ಶಂಕರ ನಾಯ್ಕ (ಕಾಯ್ಕಿಣಿ) ಅವರನ್ನು ಜೂಜಾಟದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿಸಲಾಗಿದೆ. ಇನ್ನೂ ಹಲವರು ಅರಣ್ಯ ಪ್ರದೇಶದಲ್ಲಿ ಓಡಿ ಹೋಗಿರುವ ಮಾಹಿತಿ ಲಭ್ಯವಾಗಿದೆ.

ದಾಳಿಯಲ್ಲಿ ಪೊಲೀಸರು 5 ದ್ವಿಚಕ್ರ ವಾಹನಗಳು, 4 ಆಟೋ ರಿಕ್ಷಾಗಳು ಸೇರಿದಂತೆ ರೂ.18.83 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬAಧ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗ್ರಾಮೀಣ ಠಾಣೆಯ ಈ ಕಾರ್ಯಾಚರಣೆಗೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

About The Author