November 19, 2025

ಸ್ನೇಹ ಶಾಲೆಯ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಮ್ಮ ಊಟ

ಭಟ್ಕಳ: ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ, ಈ ನುಡಿಗಟ್ಟನ್ನು ಮನಸ್ಸಿನಲ್ಲಿ ತುಂಬಿಕೊAಡು ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಭಟ್ಕಳದ ಸ್ನೇಹ ವಿಶೇಷ ಶಾಲೆಯ ಮಕ್ಕಳಿಗೆ ಪ್ರೀತಿಯ ಆಹಾರವನ್ನು ಹಂಚಿದರು.

ಅAಜುಮನ್ ಮಹಾವಿದ್ಯಾಲಯ, ಸಾಹಿಲ್ ಆನ್‌ಲೈನ್ ಭಟ್ಕಳ ಹಾಗೂ ಭಟ್ಕಳ ಮುಸ್ಲಿಂ ಯುವ ಜನತಾ ಫೆಡರೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನಮ್ಮ ಊಟ-3 ಅನ್ನದಾನ ಕಾರ್ಯಕ್ರಮವು ಮಾನವೀಯ ಮೌಲ್ಯಗಳನ್ನು ಜೀವಂತಗೊಳಿಸಿತು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಮೊಹಮ್ಮದ್ ಯೂಸುಫ್ ಕೋಲಾ ಹಾಗೂ ಮುಬಶಿರ್ ಹಲ್ಲಾರೆ, ಪ್ರಧಾನ ಕಾರ್ಯದರ್ಶಿ, ಭಟ್ಕಳ ಮುಸ್ಲಿಂ ಯುವ ಜನತಾ ಫೆಡರೇಶನ್ ಇವರ ಮಾರ್ಗದರ್ಶನದಲ್ಲಿ ನಡೆದ ಈ ಉಪಕ್ರಮಕ್ಕೆ ಸಾಹಿಲ್ ಆನ್‌ಲೈನ್‌ನಿಂದ ಆಹಾರ ಪೂರೈಕೆಯ ಸಹಕಾರ ದೊರೆಯಿತು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿ ದಾಮೋರ ನಾಯ್ಕ, ಪ್ರೊ. ಬಿ.ಎಚ್. ನಧಾಫ್, ಮಂಜುನಾಥ ಪ್ರಭು, ಉಮೇಶ ಮೇಸ್ತ, ಕೆ. ಕಲಿಮುಲ್ಲಾ, ಶ್ರೀಮತಿ ಪುರ್ಣಿಮಾ, ಶ್ರೀಮತಿ ಫಮಿನಾ ಪಾತಿಮಾ ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರು ಹೃದಯಪೂರ್ವಕ ಶ್ರಮವನ್ನರ್ಪಿಸಿದರು.

About The Author

error: Content is protected !!