ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಾವಿನಕಟ್ಟೆಯ ಮಂಜುನಾಥ ಡಿಲಕ್ಸ್ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗಿರೀಶ ತಂದೆ ಮಂಜುನಾಥ ಬಾಕಡ, ನ್ಯಾಷನಲ್ ಕಾಲೋನಿ, ಮುರ್ಡೇಶ್ವರ ನಿವಾಸಿ, ಈತನು ಮಟ್ಕಾ, ಓಸಿ ಜೂಜಾಟ ನಡೆಸುತ್ತಿದ್ದಾನೆಂಬ ನಿಖರ ಮಾಹಿತಿಯ ಮೇರೆಗೆ ಮುರುಡೇಶ್ವರ ಠಾಣೆ ಪಿಎಸೈ ಲೋಕನಾಥ ರಾಥೋಡ,ದಾಳಿ ನಡೆಸಿ,ದಾಳಿ ಯಲ್ಲಿ ನಗದು ಹಾಗೂ ಇತರೆ ವಶಪಡಿಸಿಕೊಂಡಿದ್ದಾರೆ

ಈ ಸಂಬAಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ