ಕಾರ್ಕಳ : ಬದುಕಿನ ಮುಸ್ಸಂಜೆಯಲ್ಲಿ ಇದ್ದೇವೆ ಎಂದು ಹಿರಿಯರು ನಿರಾಶರಾಗಬೇಕಿಲ್ಲ ಹಿರಿಯರಲ್ಲಿ ಅನುಭವದ ಕಣಜವಿದೆ. ಅವುಗಳನ್ನು ಹಿರಿಯರು ಕಿರಿಯರಿಗೆ ತಿಳಿ ಹೇಳಿ ಅವರ ತಪ್ಪುಗಳನ್ನು ತಿದ್ದುವುದು ಅಗತ್ಯ. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಮಾತೃ ಭೂಮಿ, ಹೆತ್ತವರು, ಗುರುಗಳು, ಹಿರಿಯರಿಗೆ ಗೌರವ ಕೊಡಬೇಕಾಗಿದೆ ಎಂದು ಕಾರ್ಕಳ ಹಿರಿಯ ನಾಗರಿಕರ ಸಂಘ ಆಯೋಜಿಸಿದ ಸಂಜೆಯಾಯಿತು ಚಂದ್ರಮ ಬಂದ ಕಾರ್ಯಕ್ರಮದಲ್ಲಿ ವಿದ್ವಾಂಸ ಎನ್. ಅರ್ .ದಾಮೋದರ ಶರ್ಮಾ ರವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಶ್ರೀ ಎಂ.ಕಮಲಾಕ್ಷ ಕಾಮತ್ ಸ್ವಾಗತಿಸಿ ಜಯರಾಂ ಕಾಮತ್ ರವರು ವಂದೇ ಮಾತರಂ ಗೀತೆ ಹಾಡಿದರು..ಕೇಶವ ನಂಬಿಯಾರ್ ಅತಿಥಿಗಳ ಪರಿಚಯಿಸಿದರು.,ಸಂಘದ ಕಾರ್ಯದರ್ಶಿ ಶ್ರೀ ಜಗದೀಶ್ ಗೋಖಲೆಯವರು ಧನ್ಯವಾದ ಸಲ್ಲಿಸಿದರು. ಸಂಘದ ಉಪಕಾರ್ಯದರ್ಶಿ ಶ್ರೀಮತಿ ಶೈಲಜಾ ಹೆಗ್ಡೆ ರವರು ಕಾರ್ಯಕ್ರಮ ನಿರ್ವಹಿಸಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ರಾಜ್ಯಮಟ್ಟದ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆ
ಸೌತ್ ಕೆನರಾ ಫೋಟೋಗ್ರಾಫರ್ ಅಶೋಷಿಯನ್ ವತಿಯಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸವ
ಕಾರ್ತೀಕ ದೀಪೋತ್ಸವ ದಿನಾಂಕ 5/11/2025 ರಂದು