August 29, 2025

ಎಸ್ ವಿ ಟಿ : ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮ

ಕಾರ್ಕಳ : ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ರೇಷ್ಮಾ ಶೆಟ್ಟಿ ಗೋರೂರು ಆಟಿ ತಿಂಗಳ ಮಹತ್ವ ಮತ್ತು ವಿಶೇಷ ಸಂಪ್ರದಾಯಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು.
ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಸುಮಾರು 33 ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಗುಂಡ ಕಟ್ಟುವ, ಹೂ ಕಟ್ಟುವ , ಚೇಟ್ಲಾ , ಲಗೋರಿ , ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಲಿಂಬು ಚಮಚ ಓಟ ಸೇರಿದಂತೆ ವಿವಿಧ ಬಗೆಯ ಆಟಗಳ ಸ್ಪರ್ಧಿಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಂಗಲ ಪ್ರಭು, ಪ್ರಭಾತ್ ರಂಜನ್, ದೇವದಾಸ್ ಕೆರೆಮನೆ, ಸುನಿಲ್ ಎಸ್ ಶೆಟ್ಟಿ, ಪಧ್ಮಪ್ರಭ ಇಂದ್ರ , ಪ್ರಭಾ ಜಿ ಭೋವಿ, ಪ್ರಿಯಾ ಪ್ರಭು, ಪ್ರಭಾವತಿ ಹೆಗ್ಡೆ , ಮಹಾಲಕ್ಷ್ಮಿ ಶೆಣೈ, ಹರೀಶ್ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತುಳು ಭಾಷೆಯಲ್ಲಿಯೇ ನಿರೂಪಿಸಿ ಸಂಯೋಜಿಸಿರುವುದು ವಿಶೇಷವಾಗಿತ್ತು.
ಹಿಂದಿ ಉಪನ್ಯಾಸಕರಾದ ಸರಸ್ವತಿ ನಿರೂಪಿಸಿದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು.
ಗಣಕಶಾಸ್ತ್ರ ಉಪನ್ಯಾಸಕಿ ರಶ್ಮಿತಾ ವಂದಿಸಿದರು.
ವರದಿ : ಅರುಣ ಭಟ್ ಕಾರ್ಕಳ

About The Author