ಕಾರ್ಕಳ : ಶ್ರೀ ದವಳ ಕಾಲೇಜ್‌ನ ಶ್ರೀ ಕ್ಷೇತ್ರ ಧರ್ಮಸ್ಥಳ ದ ರತ್ನಮ್ಮ ವೇದಿಕೆ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡುಬಿದ್ರಿ ತಾಲೂಕಿನ ಮಾಜಿ ಸಚಿವರು ಹಾಗೂ ಶಾಸಕರಾದ ಕೆ. ಅಭಯಚಂದ್ರ ಜೈನ್ ಇವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಇವರು ಮಾತನಾಡಿ ಮಾತ್ರಶ್ರೀ ಅಮ್ಮನವರು ಮಹಿಳೆಯರಿಗಾಗಿ ಹಾಕಿಕೊಂಡಿರುವ ಈ ವಿಶೇಷ ಕಾರ್ಯಕ್ರಮ ಜ್ಞಾನ ವಿಕಾಸ ಕಾರ್ಯಕ್ರಮ. ಇದರಿಂದ ಎಷ್ಟೋ ಮಹಿಳೆಯರು ಮನೆಯಿಂದ ಹೊರಗೆ ಬಂದು ಮಾತಾಡುವ ಧೈರ್ಯ ಬಂದಿದೆ. ಇದಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮವೇ ಮುಖ್ಯ ಕಾರಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕರದ ಹೇಮರಾಜ್ ಜೈನ್ ಇವರು ಭಾಗಾವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬಿದ್ರಿ ಪೊಲೀಸ್ ಠಾಣೆಯ ಉಪ ನೀರಿಕ್ಷಕರಾದ ಪ್ರತಿಭಾ ರವರು ಭಾಗವಹಿಸಿ ಕಾನೂನಿನ ಬಗ್ಗೆ, ಹಾಗೂ ತಾಯಿಯಂದಿರು ಮಕ್ಕಳನ್ನು ಪೋಷಣೆ ಮಾಡುವಲ್ಲಿ ಯಾವ ರೀತಿ ಕಾಳಜಿ ವಹಿಸಬೇಕು ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾದ ಮೂಡುಬಿದ್ರಿ ಪುರ ಸಭೆಯ ಅಧ್ಯಕ್ಷರಾದ ಜಯಶ್ರೀ ಕೇಶವ ಇವರು ಮಹಿಳೆಯರಿಗೆ ಸಮಾಜದಲ್ಲಿ ಮುಂದೆ ಬರಲು ಇದೊಂದು ಉತ್ತಮ ವೇದಿಕೆ ಇದನ್ನು ತಾವೆಲ್ಲರೂ ಬಳಸಿಕೊಂಡು ಮುಂದೆ ಬನ್ನಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಜಿಲ್ಲಾ ನಿರ್ದೇಶಕರಾದ ಗೌರವನ್ವಿತ ಶ್ರೀ ದಿನೇಶ್ ರವರು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಯನ್ನು ನೀಡಿದರು. ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರ ಶಿಸ್ತು, ಅಚ್ಚುಕಟ್ಟುತನ ಶ್ಲಾಘ ನೀಯ ಎಂದರು.
ಸದ್ರಢ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಗೋಷ್ಠಿ ಕಾರ್ಯಕ್ರಮ ವನ್ನು ಪ್ರೊಫೆಸರ್ ಮಿತ್ರ ಪ್ರಭಾ ಹೆಗ್ಡೆ, ನಿವೃತ್ತ ಪ್ರಿನ್ಸಿಪಾಲರು, ಮಾತನಾಡಿ ಸಮಾಜದಲ್ಲಿ ಮಹಿಳೆಯ ಸ್ಥಾನ ಮಾನ ಏನು, ಒಬ್ಬಳು ಮಹಿಳೆ ಇವತ್ತು ಮನಸ್ಸು ಮಾಡಿದರೆ ಏನನ್ನು ಸಾಧಿಸಸ ಬಳ್ಳಲು ಎಂಬುದಕ್ಕೆ ಇವತ್ತಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ಇಂದಿನ ಸಮಾಜ ದಲ್ಲಿ ಶಿಕ್ಷಣ ಬಹಳ ಪ್ರಾಮುಖ್ಯವಾಗಿದೆ. ಶಿಕ್ಷಣ ದ ಜೊತೆ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ವನ್ನು ಬೆಳೆಸುದು ಬಹಳ ಪ್ರಾಮುಖ್ಯತೆ. ಇಂದಿನ ಕಾರ್ಯಕ್ರಮದಲ್ಲಿ ಸದಸ್ಯರು ಮಾಡಿದ ಪುಷ್ಪ ಗುಚ್ಛ ದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಕೇಂದ್ರದ ಸದಸ್ಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಕೇಂದ್ರದ ಸದಸ್ಯರಾದ ಶ್ರೀಮತಿ ಲೀಲಾಕ್ಷಿ ಯವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯ್ತು. ಕೇಂದ್ರದ ಸದಸ್ಯರಾದ ಪದ್ಮಾವತಿ ಹಾಗೂ ಲತಾ ಹೆಗ್ಡೆ ಇವರು ಅನಿಸಿಕೆ ವ್ಯಕ್ತ ಪಡಿಸಿದರು. ತಾಲೂಕಿನ ಯೋಜನಾಧಿಕಾರಿ ಶ್ರೀ ಬಿ ಧನಂಜಯ ಸರ್ ಸ್ವಾಗತಿಸಿ, ಸಮನ್ವಯಧಿಕಾರಿ ಶ್ರೀಮತಿ ವಿದ್ಯಾ ಧನ್ಯವಾದವಿತ್ತರು. ಲೆಕ್ಕ ಪರಿಶೋಧಕರಾದ ನಾಗೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರ
೨೧ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ.೨೮ರಂದು
ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ