ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಾಗೂ ನೂತನ ಸಭಾಭವನದ ಅಡಿಗಲ್ಲು ಸಮಾರಂಭ ನಡೆಯಿತು.
ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ, ಶಾಲೆಯ ಹಳೆಯ ವಿದ್ಯಾರ್ಥಿ,ಉದ್ಯಮಿಗಳಾದ ಖಲೀಲ್ ಶೇಖ್ ಅವರು ಅಡಿಗಲ್ಲಿಡುವ ಮೂಲಕ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಪುರೋಹಿತರಾದ ವಿನಾಯಕ ಭಟ್ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.ಈ ವೇಳೆ ನುಡಿಸಿರಿ ವಾಹಿನಿಯೊಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ,ಸಚಿವ ಮಂಕಾಳ ವೈದ್ಯ ಅವರು ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದ ವೇದಿಕೆಯಲ್ಲಿ ಸಭಾಭವನ ಮಂಜೂರಿ ಮಾಡಿಸುವ ಭರವಸೆ ನೀಡಿದ್ದರು.ಅದೇ ಪ್ರಕಾರವಾಗಿ ಸಭಾಭವನ ಮಂಜೂರಿ ಮಾಡಿಸಿಕೊಡುವ ಮೂಲಕ ನುಡಿದಂತೆ ನಡೆದಿದ್ದಾರೆ.ಈ ಮೂಲಕ ತಾವೊಬ್ಬ ಶಿಕ್ಷಣ ಪ್ರೇಮಿ ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.ಶಾಲಾ ಶತಮಾನೋತ್ಸವದ ವೇಳೆ ಆಶ್ವಾಸನೆ ನೀಡಿದಂತೆ 1ಲಕ್ಷ ಧನಸಹಾಯ ವಿದ್ಯಾನಿಧಿಗೆ ನೀಡುವ ಜತೆಗೆ ಕಾರ್ಯಕ್ರಮಕ್ಕೆ 20 ಸಾವಿರ ಧನಸಹಾಯ ನೀಡಿದ್ದರು.ಮುಂದೆಯು ಶಾಲೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಸ್ಮರಿಸಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಕಲಿಕಾ ಹಬ್ಬದ ಕುರಿತು ಖರ್ವಾ ವಿಎಸ್ ಎಸ್ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ,ನಾವು ಜೀವನದಲ್ಲಿ ಸಂಪತ್ತು,ಆಸ್ತಿ ಗಳಿಸಬಹುದು ಆದರೆ ನಾವು ಇರುವಷ್ಟು ದಿವಸ ಎನು ಸೇವೆ ಮಾಡಿದ್ದೇವೆ ಎನ್ನುವುದು ಮುಖ್ಯ.ಶಾಲೆ ಇನ್ಮಷ್ಟು ಅಭಿವೃದ್ದಿ ಹೊಂದಲಿ.ಮಕ್ಕಳು ಮೊಬೈಲ್ ನಿಂದ ದೂರವಿದ್ದು,ಕಲಿಕೆಗೆ ಹಚ್ಚಿನ ಆಸಕ್ತಿ ನೀಡಿ ಎಂದು ಕಿವಿಮಾತು ಹೇಳಿದರು .
ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ಪ ನಾಯ್ಕ ಮಾತನಾಡಿ, ಈ ಶಾಲೆ ನಾಡಿಗೆ ಅನೇಕ ಸಾಧಕರ ಕೊಡುಗೆಯಾಗಿ ನೀಡಿದೆ.ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ,ಧಾರ್ಮಿಕವಾಗಿಯು ಆಸಕ್ತಿ ಮೂಡಿಸಿ ಆಗ ಮಾತ್ರ ಗುರು-ಹಿರಿಯರು ಎಂಬ ಗೌರವ ಭಾವನೆ ಮೂಡುತ್ತದೆ.ಕ್ರೀಡೆಯಲ್ಲಿಯು ತೊಡಗಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗಿದೆ ಎನ್ನುವ ದೃಷ್ಟಿಯಿಂದ ಸರ್ಕಾರ ಕಲಿಕಾ ಹಬ್ಬ ಜಾರಿ ತಂದಿದೆ.ಸರ್ಕಾರದ ಈ ನಡೆ ಉತ್ತಮವಾದದು ಎಂದರು.ಶಾಲೆಯ ಸಭಾಭವನದ ಅಡಿಗಲ್ಲು ಸಮಾರಂಭ ಇಂದೇ ನಡೆದಿರುವುದು ಇದು ಇತಿಹಾಸದ ಪುಠದಲ್ಲಿ ಚಿರಸ್ಮರಣೀಯವಾಗಲಿದೆ ಎಂದರು.
ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ಭಟ್, ಸಿಆರ್ ಪಿ ಎಮ್ ಎನ್ ಹೆಗಡೆ,ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಶಾಲಾ ಮುಖ್ಯಾಧ್ಯಾಪಕ ಶೇಖರ ನಾಯ್ಕ, ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ಪ ನಾಯ್ಕ,ಉಪಸ್ಥಿತರಿದ್ದರು. ಕ್ಲಸ್ಟರ್ ಮಟ್ಟದ ವಿವಿಧ ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ :ವಿಶ್ವನಾಥ ಸಾಲ್ಕೋಡ್

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ