
ಹೊನ್ನಾವರ: ತಾಲೂಕಿನ ಬಿಜೆಪಿ ಯುವಮೊರ್ಚಾ ಘಟಕದ ವತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮದ ಜಾಗೃತಿಗಾಗಿ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು, ಪಟ್ಟಣದ ಶರಾವತಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮೂರುಕಟ್ಟೆಯವರೆಗೆ ಸಾಗಿ ಪೊಲೀಸ್ ಠಾಣಿಯ ಹಿಂಭಾಗದಿAದ ಬಜಾರ್ ರಸ್ತೆ ಮಾರ್ಗವಾಗಿ ದುರ್ಗಾಕೇರಿ ದಂಡಿನದುರ್ಗಾ ದೇವಾಲಯದವರೆಗೂ ಸಂಚರಿಸಿತು. ಕಾರ್ಯಕ್ರಮದ ಕುರಿತು ಜಿಲ್ಲಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ ಮಾತನಾಡಿ ದೇಶದ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡಬೇಕು ಎನ್ನುವ ಉದ್ದೇಶದಿಂದ ಯುವಮೊರ್ಚಾ ಘಟಕದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಹಿಂದೆ ಆಪರೇಷನ್ ಸಿಂಧೂರ ಬೆಂಬಲ ವ್ಯಕ್ತಪಡಿಸಿ ದೇಶದ ಯೋಧರ ಜೊತೆ ನಾವಿದ್ದೇವೆ ಹಾಗೂ ಅವರಿಗೆ ಗೌರವ ಸೂಚಕವಾಗಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಪ್ರತಿಯೊಬ್ಬ ಭಾರತೀಯರ ಮನೆ ಮೇಲೆ ದೇಶದ ತ್ರಿವರ್ಣ ಧ್ವಜ ಸ್ವಾಂತತ್ರ‍್ಯೋತ್ಸವ ದಿನ ಹಾರಿಸಲು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ . ಭಾರತಾಂಬೆ ಹಾಗೂ ಸೈನಿಕರನ್ನು ಗೌರವಿಸುವ ಯಾವುದಾದರೂ ಒಂದು ಪಕ್ಷ ಇದೆ ಎಂದರೆ ಭಾರತೀಯ ಜನತಾ ಪಾರ್ಟಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಧ್ಯಕ್ಷ ಮಂಜುನಾಥ ನಾಯ್ಕ, ಯುವಮೊರ್ಚಾ ತಾಲೂಕ ಅಧ್ಯಕ್ಷ ರಘು ಖಾರ್ವಿ, ಪ.ಪಂ.ಅಧ್ಯಕ್ಷ ವಿಜಯ ಕಾಮತ್, ಶಿಕ್ಷಣ ಪ್ರಕೋಷ್ಠಾದ ರಾಜ್ಯ ಸಹಸಂಚಾಲಕರಾದ ಎಂ.ಜಿ.ಭಟ್, ಬಿಜೆಪಿ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ ಗಣಪತಿ ಗೌಡ ಚಿತ್ತಾರ, ಯೋಗಿಶ ಮೇಸ್ತ, ರಾಜು ಭಂಡಾರಿ, ಗಣಪತಿ ನಾಯ್ಕ ಬಿಟಿ, ಯುವಮೊರ್ಚಾ ಪಧಾಧಿಕಾರಿಗಳು, ಸದಸ್ಯರು ಇದ್ದರು.
ವರದಿ : ವಿಶ್ವನಾಥ ಸಾಲ್ಕೊಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ