August 30, 2025

ಮೂಡಬಿದ್ರೆ ಬಸ್ಸುನಲ್ಲಿ ವ್ಯಕ್ತಿಯೋರ್ವನ ಅಸಭ್ಯ ವರ್ತನೆಗೆ ಹಿಂದೂ ಮಹಿಳಾ ಸಂರಕ್ಷಣ ವೇದಿಕೆ ಮೂಡಬಿದ್ರೆ ವತಿಯಿಂದ ದೂರು ದಾಖಲು

ಕಾರ್ಕಳ : ಸಾಮಾಜಿಕ ಜಾಲತಾಣಗಳಲ್ಲಿ ಮೂಡಬಿದ್ರೆ ಬಸ್ಸುನಲ್ಲಿ ವ್ಯಕ್ತಿಯೋರ್ವ ಯುವತಿಯೊಂಡನೆ ಅಸಭ್ಯ ವರ್ತನೆಯ ವಿಡಿಯೋ ಹರಿದಾಡುತಿದ್ದು ಅವನ ಮೇಲೆ ಯಾರು ದೂರು ಕೊಡದ ಕಾರಣ ಪೊಲೀಸ್ ಇಲಾಖೆ ಆತನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದರು, ಇದನ್ನು ಹಿಂದೂ ಮಹಿಳಾ ಸಂರಕ್ಷಣ ವೇದಿಕೆ ಮೂಡಬಿದ್ರೆ ತೀರ್ವವಾಗಿ ವಿರೋಧಿಸಿ ಸ್ವತಃ ಸಂಘಟನೆ ವತಿಯಿಂದ ದೂರನ್ನು ಮೂಡಬಿದ್ರೆ ಪೊಲೀಸ್ ನಿರೀಕ್ಷಣಾ ಅಧಿಕಾರಿಗಳಾದ ಸಂದೇಶ್ ಪಿ ಜಿ ಅವರಿಗೆ ಶ್ರೀಮತಿ ರಮಿತಾ, ಗೀತಾ, ರಂಜಿತಾ ಅವರು ನೀಡಿದ್ದು, ದೂರನ್ನು ಇಲಾಖೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದು ಮಹಿಳೆಯರಿಗೆ ಸಾಮಾಜಿಕವಾಗಿ ನೈತಿಕವಾಗಿ ಧೈರ್ಯ ಮೂಡಿಸುವಂತಗಿದೆ.
ವರದಿ : ಅರುಣ ಭಟ್ ಕಾರ್ಕಳ

About The Author