
ಗುಂಡ್ಲುಪೇಟೆ : ಪಟ್ಟಣದ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ಕಾರ್ಯಪಾಲಕ ಅಭಿಯಂತರರ ನೂತನ ಕಚೇರಿಯನ್ನು ಕ್ಷೇತ್ರದ ಶಾಸಕರಾದ ಹೆಚ್ ಎಂ ಗಣೇಶ್ ಪ್ರಸಾದ್ ರವರು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸುಮಾರು ವರ್ಷಗಳಿಂದ ನೆನೆ ಗುದ್ದಿಗೆ ಬಿದ್ದಿದ್ದ ಕಚೇರಿಯನ್ನು ಹೊಸದಾಗಿ ನಿರ್ಮಿಸಿ ಇದೇ ಮೊಟ್ಟ ಮೊದಲ ಬಾರಿಗೆ ಪಟ್ಟಣದಲ್ಲಿ ಕಟ್ಟಲಾಗಿದೆ. ಈ ಮಹಾನ್ ಕಾರ್ಯ ಮಾಡುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಜಿಎಸ್ ಮಧುಸೂದನ್ ಉಪಾಧ್ಯಕ್ಷರಾದ ಅಣ್ಣಯ್ಯ ಸ್ವಾಮಿ, ಹಾಗೂ ಪುರಸಭೆ ಎಲ್ಲ ಸದಸ್ಯರುಗಳು ಸೇರಿದಂತೆ ಇ.ಇ. ಪ್ರದೀಪ್ ಕುಮಾರ್, ಎ.ಇ.ಇ. ಕೆಎಂ ಸಿದ್ದಲಿಂಗಪ್ಪ, ಕೆಇಬಿ ಇಲಾಖೆಯ ನೌಕರರ ವರ್ಗದವರು ಹಾಗೂ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಇದ್ದರು.
ವರದಿ: ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories