ಭಟ್ಕಳ: ಭಟ್ಕಳ ಲೈಫ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇದರಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳು ಸೇರಿದಂತೆ ನೈರ್ಮಲ್ಯ ಕಾರ್ಯಕರ್ತರು, ಮಂಗಳಮುಖಿಯರು ಮತ್ತು ನಮಸ್ತೆ ವಿಭಾಗದವರು ಉಚಿತ ಹಾಗೂ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಪಡೆಯಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮೂಳೆ ರೋಗ ತಜ್ಞ ಡಾ.ನವಾಬ್ ತಿಳಿಸಿದ್ದಾರೆ.
ಆಸ್ಪತ್ರೆಯ ಆಡಳಿತ ಮಂಡಳಿ ಚೇರ್‌ಮನ್, ಅನಿವಾಸಿ ಉದ್ಯಮಿ ಮುಹಮ್ಮದ್ ಯೂನೂಸ್ ಕಾಝಿ ಮಾತನಾಡಿ, ಆಯುಷ್ಮಾನ್ ಯೋಜನೆಗೆ ಸೇರ್ಪಡೆಗೊಳಿಸಲು ಮೂರು ವರ್ಷಗಳಿಂದ ನಿರಂತರ ಪ್ರಯತ್ನ ನಡೆದಿದೆ. ಬೆಂಗಳೂರಿನಿAದ ಬೆಳಗಾವಿ, ವಿಜಯಪುರಗಳ ತನಕ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ ಫಲಿತಾಂಶವೇ ಈ ಸಾಧನೆ. ಸಚಿವ ಮಂಕಾಳ್ ವೈದ್ಯ, ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಹಾಗೂ ಡಾ.ಸವಿತಾ ಕಾಮತ್ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಧನ್ಯವಾದ ಅರ್ಪಿಸಿದರು.
ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಸಲ್ಮಾನ್ ಜುಬಾಪು ಮಾತನಾಡಿ, ಐದು ವರ್ಷಗಳ ಹಿಂದೆ ಖಾಸಗಿ ಕ್ಲಿನಿಕ್ ಆಗಿ ಪ್ರಾರಂಭಗೊAಡ ಲೈಫ್ ಕೇರ್ ಇಂದು ಸೂಪರ್ ಸ್ಪೆಷಾಲಿಟಿ ಘಟಕವಾಗಿ ರೂಪಾಂತರಗೊAಡಿದೆ. ಆಯುಷ್ಮಾನ್ ಭಾರತ್ ಜೊತೆಗೆ ಸುನಾಕಾ, ಎಚ್‌ಡಿಎಫ್‌ಸಿ ವಿಮೆ, ಧರ್ಮಸ್ಥಳ ಸುರಕ್ಷಾ, ಕೆಎಎಸ್‌ಎಸ್ ಹಾಗೂ ಇಎಸ್‌ಐ ಯೋಜನೆಗಳ ಅಡಿಯಲ್ಲಿ ಸೇವೆ ಒದಗಿಸುತ್ತಿದ್ದೇವೆ. 24/7 ತುರ್ತು ಚಿಕಿತ್ಸಾಘಟಕ, ತಜ್ಞ ವೈದ್ಯರ ಸಮಾಲೋಚನೆ, ಫಾರ್ಮಸಿ, ಪ್ರಯೋಗಾಲಯ ಮತ್ತು ಆಂಬ್ಯುಲೆನ್ಸ್ ಸೇವೆಗಳ ಜೊತೆಗೆ ಶೀಘ್ರದಲ್ಲೇ ಐಸಿಯು ಸೇವೆಗಾಗಿ ಎಂಡಿ ಮೆಡಿಸಿನ್ ತಜ್ಞರನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು. ಅವರು ಮುಂದುವರಿದು, ಸಮುದಾಯದ ಎಲ್ಲಾ ವರ್ಗದವರು ಈ ಯೋಜನೆಯ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ