September 3, 2025

ಮುರ್ಡೇಶ್ವರದಲ್ಲಿ ಇ-ಸಿಗರೇಟ್ ಮಾರಾಟ ದಂಧೆ ಬಯಲು: ನಿಷೇಧಿತ ವಸ್ತುಗಳು ವಶ

ಭಟ್ಕಳ: ಮುರ್ಡೇಶ್ವರದಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ಬೇಟೆ ಬಿದ್ದು ಬಂಧಿಸಿರುವ ಘಟನೆ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ.

ಬAಧಿತನನ್ನು ಮಸೂದ್ ಅಹಮದ್ (ಮೂಗ್ದಮ್ ಕಾಲೋನಿ ನಿವಾಸಿ) ಎಂದು ಗುರುತಿಸಲಾಗಿದೆ. ಆರೋಪಿ ತೆರ್ನಮಕ್ಕಿ ಚರ್ಚ್ ಹತ್ತಿರ ಇ ಸಿಗರೇಟ್ ಹಾಗೂ ಅದರ ಪರಿಕರಗಳನ್ನು ಮಾರಾಟ ಮಾಡುತ್ತಿದ್ದನೆಂಬ ಖಚಿತ ಮಾಹಿತಿ ದೊರಕುತ್ತಿದ್ದಂತೆಯೇ ಪಿಎಸೈ ಹಣಮಂತ ಬಿರಾದಾರ ನೇತೃತ್ವದ ತಂಡ ದಾಳಿ ನಡೆಸಿತು.
ಕಾರ್ಯಾಚರಣೆಯಲ್ಲಿ ಪೊಲೀಸರು ಆರೋಪಿಯಿಂದ ಇ ಸಿಗರೇಟ್‌ಗಳು ಹಾಗೂ ಇ-ಸಿಗರೇಟ್‌ಗಳಿಗೆ ತುಂಬುವ ಐದು ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

About The Author

error: Content is protected !!