
ಹೊನ್ನಾವರ : ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದದ್ದು. ಈ ವೃತ್ತಿ ಬದುಕನ್ನು ಪವಿತ್ರವನ್ನಾಗಿಸಿ ತನ್ನ ಬದುಕಿಗೆ ಅನ್ವಯಿಸಿ ನೆರೆ-ಹೊರೆಯವರಿಗೆ ಮಾದರಿಯಾದ ಶಿಕ್ಷಕ ಪಿ.ಆರ್. ನಾಯ್ಕ ಎಂದು ಧಾರವಾಡದ ಆಯುಕ್ತರ ಕಾರ್ಯಾಲಯದ ನಿರ್ದೇಶಕರಾದ ಈಶ್ವರ ನಾಯ್ಕ ಹೇಳಿದರು.

ಇತ್ತೀಚೆಗೆ ಹೊಳೆಗದ್ದೆ ಶಾಂತಿಕಾAಬ ಸಭಾಭವನದಲ್ಲಿ ದೇವಗಿರಿ ಗ್ರಾಮ ಪಂಚಾಯತ್ ಮಟ್ಟದ ನಾಗರಿಕರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಆರ್. ನಾಯ್ಕರನ್ನು ಅಭಿನಂದಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಇಲಾಖೆಯ ಎಲ್ಲಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಮಕ್ಕಳ ಸ್ನೇಹಿ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿ ಅವರನ್ನರಸಿ ಬಂದಿರುವುದು ಅವರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಎಂದರು.

ಹೊನ್ನಾವರದ ದಂಡಾಧಿಕಾರಿ ಪ್ರವೀಣ ಕರಾಂಡೆ ಮಾತನಾಡಿ, ಪಿ.ಆರ್. ನಾಯ್ಕರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ನಮ್ಮ ತಾಲೂಕಿಗೆ ಹೆಮ್ಮೆಯಾಗಿದೆ. ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಹಿರಿಯ ನಿರ್ದೇಶಕರು ಹೊಳೆಗದ್ದೆಗೆ ಬಂದು ಅಭಿನಂದಿಸಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದರು.

ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಮಾತನಾಡಿ, ಪಿ.ಆರ್. ನಾಯ್ಕರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಶಿಕ್ಷಣ ಇಲಾಖೆಗೆ ಸಂದ ಗೌರವವಾಗಿದೆ . ಸದಾ ಮಕ್ಕಳ ಸ್ನೇಹಿಯಾಗಿ ನಾವಿನ್ಯಯುತ ಕಲಿಕಾ ವಿಧಾನವೇ ಅವರ ಪ್ರಶಸ್ತಿಗೆ ಕಾರಣ ಎಂದರು. ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿ, ಕ್ರಿಯಾಶೀಲ ಶಿಕ್ಷಕರಾಗಿ ಶೈಕ್ಷಣಿಕ ಮತ್ತು ಸಾಹಿತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಪರೂಪದ ಶಿಕ್ಷಕರು ಪ್ರಶಸ್ತಿಯ ಬೆನ್ನಿಗೆ ಬೀಳದೆ ಪ್ರಶಸ್ತಿಯೇ ಅವರನ್ನರಸಿ ಬಂದಿದೆ ಎಂದರು.

ಜೆಡಿಎಸ್ ಪ್ರಮುಖ ಸೂರಜ ನಾಯ್ಕ ಸೋನಿ ಮಾತನಾಡಿ, ಸಾಂಸ್ಕೃತಿಕ ಮತ್ತು ಸಾಹಿತಿಕ ಬೀಡಾದ ಹೊಳೆಗದ್ದೆ ಊರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಇಡೀ ಊರಿಗೆ ಊರೇ ಸಂಭ್ರಮಿಸಿ ಹಬ್ಬದಂತೆ ಆಚರಿಸುವಂತಾಗಿದೆ ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ,ಪಿ.ಆರ್. ನಾಯ್ಕರಿಗೆ ನೀಡಿದ ಪ್ರಶಸ್ತಿಯಿಂದ ಶಿಕ್ಷಣ ಇಲಾಖೆಯ ಮೌಲ್ಯ ಹೆಚ್ಚಿಸಿದೆ. ಶಾಲಾ ಮಕ್ಕಳನ್ನು ಮನೆ ಮಕ್ಕಳಂತೆ ಪ್ರೀತಿಸಿದ ಕ್ರಿಯಾಶೀಲ ಶಿಕ್ಷಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್. ಟಿ.ನಾಯ್ಕ ಮಾತನಾಡಿ,ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಪ್ರತಿಭಾನ್ವಿತ ಶಿಕ್ಷಕ ಪಿ. ಆರ್.ನಾಯ್ಕರವರ ಮುಡಿಗೇರಿದ ರಾಜ್ಯ ಪ್ರಶಸ್ತಿ ದೇವಗಿರಿಯ ಮುಕುಟಕ್ಕೆ ಕಳಸ ತೊಡಿಸಿದ ಕಿರೀಟದಂತಾಗಿದೆ. ಅವರ ಕೆಲಸಕ್ಕೆ ಸಹಕರಿಸಿದ ತಾಯಿ ನಾಗಮ್ಮ ನಾಯ್ಕ, ಪತ್ನಿ ಅರುಣ ನಾಯ್ಕರನ್ನು ಅಭಿನಂದಿಸಿ ಮಾತನಾಡಿದರು.

ಸಾಹಿತಿಗಳಾದ ಪುಟ್ಟು ಕುಲಕರ್ಣಿ, ಹೊನ್ನಪ್ಪಯ್ಯ ಗುನಗ, ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ದುರ್ಗೆಕರ, ಹೊನ್ನಾವರ ತಾಲೂಕಾ ಪ್ರಾ. ಶಾ. ಶಿ. ಸಂಘ ಅಧ್ಯಕ್ಷ ಎಂ.ಜಿ. ನಾಯ್ಕ, ಜಿಲ್ಲಾ ಪ್ರಾ.ಶಾ.ಶಿ.ಸಂ. ಕಾರ್ಯದರ್ಶಿ ಎಂ.ಎನ್.ನಾಯ್ಕ, ಕಸಾಪ ಅಧ್ಯಕ್ಷ ಪ್ರಮೋದ ನಾಯ್ಕ, ಹೊನ್ನಾವರ ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವಗಿರಿ ಗ್ರಾಮ ಪಂಚಾಯತ, ಹೊನ್ನಾವರದ ದಂಡಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಜನತಾ ವಿದ್ಯಾಲಯ ಟ್ರಸ್ಟ್ ಧಾರೇಶ್ವರ, ವ್ಯವಸಾಯ ಸೇವಾ ಸಹಕಾರಿ ಸಂಘ ಧಾರೇಶ್ವರ, ಕುಮಟಾ ನಾಮಧಾರಿ ನೌಕರರ ಸಂಘ, ಹೊನ್ನಾವರದ ಉಪನ್ಯಾಸಕರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಶಾಂತಿಕಾAಬ ಗೆಳೆಯರ ಬಳಗ, ಸಿರಿಗನ್ನಡ ಮಕ್ಕಳ ವೇದಿಕೆ ಹೊನ್ನಾವರ, ಜಟಕ ದೇವಸ್ಥಾನ ಸಮಿತಿ, ನಾಮಧಾರಿ, ಹಾಲಕ್ಕಿ, ಜಿಎಸ್‌ಬಿ , ಮಡಿವಾಳ ಸಮಾಜದವರಿಂದ ಹಾಗೂ ವಿವಿಧ ಸಂಘಟನೆ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

More Stories
ಹೊನ್ನಾವರ ಪೊಲೀಸರಿಂದ 125ರ ಪ್ರಕಾರ ಮೊಕದ್ದಮೆ ದಾಖಲು
ಮಾನ್ಯತೆ ನವೀಕರಣದಲ್ಲಿ ಆಗುತ್ತಿರುವ ತೊಡಕುಗಳನ್ನು ಕೂಡಲೇ ಸರಳೀಕರಿಸಿ -ಎಲ್.ಎಮ್.ಹೆಗಡೆ
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶಾಲೆಗಳತ್ತ ಸಾಹಿತಿಗಳು