September 10, 2025

ಧರ್ಮರಕ್ಷಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಉಳಿಸುವ ಸತ್ಕಾರ್ಯಕ್ಕೆ ಮುಂದಾಗೋಣ : ಶಾಸಕ ಸುನೀಲ್ ಕುಮಾರ್

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗೆಗಿನ ಅಪಪ್ರಚಾರದ ತಂತ್ರಗಳು ಒಂದೊAದಾಗಿ ನಡೆಯುತ್ತಿದ್ದಂತೆ ನಾವುಗಳು ಅದನ್ನು ಆರಂಭದಲ್ಲಿಯೇ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು ಮತ್ತು ಅದರ ರಹಸ್ಯವನ್ನು ತಿಳಿದುಕೊಳ್ಳುವಾಗ ಸಮಯ ಮೀರಿತ್ತು ಎಂದು ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ಕಾರ್ಕಳದ ಕುಕ್ಕುಂದೂರು ಮೈದಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ‍್ಯತೆಗೆ ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವುದನ್ನು ವಿರೋಧಿಸುವ ಜನಾಗ್ರಹ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.

ಹೆಗ್ಗಡೆಯವರ ವೈಯಕ್ತಿಕ ನಿಷ್ಠೆಯಿಂದ ನಾನು ಪ್ರತಿಭಟಿಸದೇ ಹಿಂದುತ್ವದ ರಕ್ಷಕರಲ್ಲೊಬ್ಬನಾಗಿದ್ದುಕೊಂಡು ಹಿಂದೂ ಧರ್ಮದ ರಕ್ಷಣೆಯ ಪರವಾಗಿ ಮಾತಾಡುತ್ತಿದ್ದೇನೆ ಎಂಬುದಾಗಿ ಸಮರ್ಥಿಸಿಕೊಂಡ ಅವರು, ವಿಧಾನಸಭಾ ಕಲಾಪದಲ್ಲಿ ಹೆಚ್ಚು ಸಮಯ ಈ ವಿಚಾರ ಮಾತಾಡಿದ್ದಕ್ಕೆ ಸಾಕಷ್ಟು ಟೀಕೆಗಳೂ ಬಂದಿದ್ದುವು. ಹಿಂದುತ್ವದ ರಕ್ಷಣೆಯ ವಿಚಾರಕ್ಕೆ ಬಂದಾಗ ಯಾವುದೇ ಬಗೆಯ ಟೀಕೆ ಟಿಪ್ಪಣಿಯನ್ನೂ ಗಣನೆಗೆ ತೆಗೆದುಕೊಂಡವನು ನಾನಲ್ಲ ಎಂದು ಹೇಳಿದರು. ಈ ನಮ್ಮ ಸಲುಗೆ ಅಥವಾ ವಿರೋಧಿಸಲಾಗದ ಅಶಕ್ತತೆ ಹೆಚ್ಚು ಹೆಚ್ಚು ತೋರಿ ಬಂದಲ್ಲಿ ಮುಂದೊAದು ದಿನ ಅದೇ ಚಾಳಿ ಎಲ್ಲ ಹಿಂದೂ ದೇವಸ್ಥಾನಗಳನ್ನೂ ಕಬಳಿಸಬಹುದು. ನಾವೆಲ್ಲರೂ ವ್ಯಕ್ತಿ ನಿಷ್ಠೆ ಬದಿಗಿಟ್ಟು ಧರ್ಮರಕ್ಷಕರಾಗಿ ಮುಂದೆ ಬರಬೇಕು. ಸಜ್ಜನಿಕೆಯನ್ನು ಮನೆಯಲ್ಲಿಟ್ಟು ನಾವು ಹೊರಗೆ ಬೀದಿಗೆ ಬಂದು ಧರ್ಮರಕ್ಷಣೆಗಾಗಿ ಹೋರಾಟ ಮಾಡಬೇಕು ಎಂದು ಸಭ್ಯರ ಮುಂದೆ ಮನವಿ ಮಾಡಿದರು.

ದ. ಕ. ಕೇಂದ್ರ ಸಹಕಾರಿ ಬ್ಯಾಂಕಿನ ಮತ್ತು ರಾಜ್ಯ ಸಹಕಾರಿ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನ್ನಾಡಿದರು. ಧರ್ಮಸ್ಥಳ ಕ್ಷೇತ್ರ ಜೊತೆಗೆ ಧರ್ಮಾಧಿಕಾರಿಯ ತೇಜೋವಧೆಗೆ ಪ್ರಯತ್ನಿಸುವ ಸಾವುದೇ ಸಂಘಟನೆ ಅಥವಾ ವ್ಯಕ್ತಿಯಾಗಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಂಡು ಶಿಕ್ಷೆ ದೊರಕಿಸುವ ಕೆಲಸವನ್ನು ಸರಕಾರ ಮಾಡಬೇಕೆಂದು ಮನವಿ ಮಾಡಿದರು.

ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ವಾದಿರಾಜ ಸ್ವಾಮಿಯವರು ಕುಡುಮಪುರಕ್ಕೆ ಧರ್ಮಸ್ಥಳ ಎಂದು ಮಾಮಕರಣ ಮಾಡಿರುತ್ತಾರೆ. ಧರ್ಮಸ್ಥಳಕ್ಕೆ ಮಸಿ ಬಳಿಯುವ ಯಾವ ಸಾಹಸವೂ ನೆರವೇರುವುದಿಲ್ಲ ಎಂದು ತಿಳಿಸಿದರು. ಲಲಿತಕೀರ್ತಿ ಭಟ್ಚಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಕಾರ್ಕಳ ಜೈನ ಮಠ, ವಿಖ್ಯಾತಾನಂದ ಸ್ವಾಮೀಜಿ ಸೋಲೂರು ಮಠ, ಜಿತೇಂದ್ರ ಕುಂದೇಶ್ವರ,ಎಮ್. ನ್ಯಾಯವಾದಿ ಕೆ. ವಿಜಯ ಕುಮಾರ್,ರವೀಶ್ ತಂತ್ರಿ ಕುಂಟಾರು ಕಾಸರಗೋಡು, ಶ್ಯಾಮಲಾ ಕುಂದರ್ ಅವರುಗಳೆಲ್ಲರು ತಮ್ಮ ಮಾತುಗಳಲ್ಲಿ ಧರ್ಮಸ್ಥಳ ವಿರೋಧಿ ತಂಡಗಳನ್ನು ಬಲವಾಗಿ ಖಂಡಿಸಿದರು ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ವಿನಾಕಾರಣ ನಿಂದಿಸುವುದನ್ನು ವಿರೋಧಿಸಿದರು.

ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಉದ್ಯಮಿ ಬೋಳ ಪ್ರಭಾಕರ ಕಾಮತ್ ಸಂದರ್ಭೋಚಿತ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕರಲ್ಲಿ ಪ್ರಮುಖರಾದ ಬಜಗೋಳಿ ರವೀಂದ್ರ ಶೆಟ್ಟಿಯವರು ಸಭಾ ನಿರ್ಣಯವನ್ನು ವಾಚಿಸಿದರು. ರವೀಂದ್ರ ಕುಕ್ಕುಂದೂರು ವಂದನಾರ್ಪಣೆಗೈದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!