September 10, 2025

ಶಿಕ್ಷಕರಾಗುವುದು ಒಂದು ಭಾಗ್ಯ ದೇವರ ಆಶೀರ್ವಾದವಿದ್ದವರು ಮಾತ್ರ ಶಿಕ್ಷಕರಾಗಲು ಸಾಧ್ಯ

ಕಾರ್ಕಳ : ಕಾರ್ಕಳ ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ದಾನಿಗಳು ಹಾಗೂ ವಿಶ್ರಾಂತ ಲೆಕ್ಕ ಪರಿಶೋಧಕರಾದ ಶ್ರೀ ಕಮಲಾಕ್ಷ ಕಾಮತ್ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಯುವಶಕ್ತಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ವಹಿಸಿದ್ದರು., ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಅಬ್ದುಲ್ ಖಾಲಿಕ್ ನಿರ್ದೇಶಕರಾದ ಶ್ರೀ ವಸಂತ್ ಎಂ, ನವೀನ್ ಸುವರ್ಣ, ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಹೆಗ್ಡೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇತನ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಮಮತಾ ಕುಲಾಲ್ ಉಪಸ್ಥಿತರಿದ್ದರು, ಶಿಕ್ಷಕಿ ಶ್ರೀಮತಿ ರೇಣುಕಾ ಸ್ವಾಗತಿಸಿ ಶಿಕ್ಷಕಿ, ಶ್ರೀಮತಿ ನವ್ಯ ನಿರೂಪಿಸಿದರು,ಶಿಕ್ಷಕಿ ಶ್ರೀಮತಿ ಸುಪ್ರೀತ ವಂದಿಸಿದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!