September 11, 2025

ಪೊಲೀಸರಿಗೆ ಒತ್ತಡ ನಿರ್ವಹಣೆಯ ಪಾಠ:ಸಮಯೋಚಿತ ಹೆಜ್ಜೆ ಭಟ್ಕಳದಲ್ಲಿ ಕಾರ್ಯಾಗಾರ

ಭಟ್ಕಳ: ಜನರ ರಕ್ಷಣೆಯ ಜವಾಬ್ದಾರಿ ಹೊತ್ತು, ಕಾನೂನು-ಸುವ್ಯವಸ್ಥೆ ಕಾಪಾಡುವ ಹಾದಿಯಲ್ಲಿ ನಿರಂತರ ಒತ್ತಡ ಅನುಭವಿಸುತ್ತಿರುವ ಪೊಲೀಸರಿಗೆ ಮಾನಸಿಕ-ದೈಹಿಕ ಸದೃಢತೆ ಹಾಗೂ ಒತ್ತಡ ನಿರ್ವಹಣೆ ಕುರಿತ ಕಾರ್ಯಾಗಾರ ಭಟ್ಕಳದಲ್ಲಿ ಆಯೋಜನೆಯಾಯಿತು.
ಎ.ಕೆ. ಹಫೀಜ್ಕಾ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಪ್ರೊ. ಪ್ರವೀಣ್ ವಿ.ಜಿ. ಅವರು ಮಾತನಾಡಿ, ಪೊಲೀಸರ ಬದುಕಿನಲ್ಲಿ ಮಾನಸಿಕ ಸಮತೋಲನದ ಅಗತ್ಯತೆಯನ್ನು ಒತ್ತಿ ಹೇಳಿದರು. ಸರಳ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಮಧುಮೇಹ-ರಕ್ತದೊತ್ತಡ ನಿಯಂತ್ರಣ ಮಾರ್ಗಗಳನ್ನು ವಿವರಿಸಿ, ಆಕ್ಯೂಪ್ರೆಸ್ಸರ್ ಸಾಧನ ಬಳಕೆಯ ಕುರಿತು ತಿಳಿಸಿದರು.

ನಿರಂತರ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯಪಟುವಿಗೆ ಇದು ಬಲ ತುಂಬುವ ಪ್ರಯತ್ನವಾಗಿದ್ದು, ಇಲಾಖೆಯಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕಿದೆ ಎಂಬ ಸಂದೇಶ ಈ ಮೂಲಕ ಮತ್ತೊಮ್ಮೆ ಸ್ಪಷ್ಟವಾಯಿತು. ಕಾರ್ಯಕ್ರಮದಲ್ಲಿ ಸಿಪಿಐ ದಿವಾಕರ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಎಸ್‌ಐ ನವೀನ್ ನಾಯ್ಕ, ಎಸ್‌ಐ ರನ್ನುಗೌಡ, ಎಸ್‌ಐ ತಿಮ್ಮಪ್ಪ ಹಾಗೂ ಎಸ್‌ಐ ರಾಥೋಡ್ ಉಪಸ್ಥಿತರಿದ್ದರು.

About The Author

error: Content is protected !!