ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್‌ನಲ್ಲಿ 1997-98ನೇಸಾಲಿನ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಮತ್ತು ಗುರುವಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತಮಗೆ ವಿದ್ಯೆ ಕಲಿಸಿ ಭವಿಷ್ಯತ್ತನ್ನು ರೂಪಿಸಲು ನೆರವಾದ ತಮಗೆ ಕಲಿಸಿದ ಎಲ್ಲಾ ಶಿಕ್ಷಕರುಗಳನ್ನು ವಿದ್ಯಾರ್ಥಿಗಳು ಹೂಮಳೆಗೆರೆದು ಸ್ವಾಗತಿಸಿದರು. ಪ್ರತಿಯೊಬ್ಬ ಶಿಕ್ಷಕರನ್ನು, ಆತ್ಮೀಯವಾಗಿ ನೆನಪಿಸಿಕೊಂಡು, ನೆನಪಿನ ಕಾಣಿಕೆ ನೀಡಿ ಸಂಭ್ರಮಿಸಿದರು.
ತಮಗೆ ಕಲಿಸಿದ ಶಿಕ್ಷಕರ ಕುರಿತು ಪದ್ಯ ರಚಿಸಿ ಹಾಡಿದರು. ತಾವೇ ರಚಿಸಿದ ಸ್ವಾಗತ ಗೀತೆಯನ್ನು ಹಾಡಿ ಖುಷಿಪಟ್ಟರು. ತಾವು ಕಲಿತ ವರ್ಗ ಕೋಣೆಯಲ್ಲಿ ಸ್ವಲ್ಪ ಕಾಲ ಕುಳಿತು ಪಾಠ ಕೇಳಿದರು . ತಾವುಕಲಿತ ಶಾಲೆಯ ನೆನಪುಗಳನ್ನು ಮೆಲಕು ಹಾಕಿದರು. ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ನೀಡಿದರು. ವೇದಿಕೆಯಲ್ಲಿತಮ್ಮ ಅನುಭವವನ್ನು ಹಂಚಿಕೊAಡರು. ನಿವೃತ್ತರಾದ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನುನೆನಪಿಸಿಕೊಂಡು ಖುಷಿಪಟ್ಟರು. ಶಾಲೆಯ ಪರವಾಗಿ ಅಧ್ಯಾಪಕರಾದ ಜಯಂತನಾಯಕ ಹಾಗೂ ಶಿಕ್ಷಕರಾದ ಅಶೋಕ ನಾಯ್ಕ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿರುವ ನೈಜ ಪ್ರೇಮವನ್ನು ಕೊಂಡಾಡಿದರು .
ಪೂರ್ವವಿದ್ಯಾರ್ಥಿ ಕಿರಣ ಪರ್ನಾಂಡಿಸ್ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಿಸಿದರು. ಶಾಲೆಯ ಪೂರ್ವವಿದ್ಯಾರ್ಥಿಗಳಾದ ಹಾಗೂ ಶಿಕ್ಷಕರಾದ ಪ್ರಮೀಳಾ ಶೆಟ್ಟಿ, ಗುರುಮೂರ್ತಿ ನಾಯ್ಕ ಗಂಗಾವತಿಯಲ್ಲಿ ಡಿಸ್ಟಿಕ್ ನ್ಯಾಯಾಧೀಶರಾದ ಸದಾನಂದ ನಾಯ್ಕ, ಹೋಟೆಲ್ ಉದ್ಯಮಿ ವಿನಾಯಕ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊAಡರು. ಸಿಟಿ ಮೊಬೈಲ್ ಮಾಲೀಕರಾದ ಹರೀಶ್ ನಾಯ್ಕ್, ವರ್ತಕ ಸಂತೋಷ, ಹೋಟೆಲ್ ಉದ್ಯಮಿ ವಿನಾಯಕ ಶೆಟ್, ಮೆಟಲ್ ಮರ್ಚೆಂಟ್ ಬುಡಾನ್ ಸಾಬ್, ಶ್ರೀಮತಿ ವೀಣಾ ಹೆಗಡೆ, ಚಂದ್ರಾಣಿ, ಮುಂತಾದವರು ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ತಮಗೆ ವಹಿಸಿದ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣರಾದರು. ಪೂರ್ವವಿದ್ಯಾರ್ಥಿಗಳು ಮತ್ತು ಶಾಲೆಯನ್ನು ಒಗ್ಗೂಡಿಸುವಲ್ಲಿಇದೊಂದು ಉತ್ತಮ ಕಾರ್ಯಕ್ರಮವಾಗಿತ್ತು.

More Stories
ಕರ್ಕಿಯಲ್ಲಿ ದಿವಂಗತ ಪ್ರಭಾಕರ ಭಂಡಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಆಕಸ್ಮಿಕ ಬೆಂಕಿ
೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ