March 4, 2026

ಪುರ ಗ್ರಾಮದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಣ್ಣಿಮೆ ವಿಶೇಷ ಪೂಜಾ ಸಡಗರ ಹರಿದು ಬಂದ ಭಕ್ತ ಸಾಗರ.

ಕೆ.ಆರ್.ಪೇಟೆ.ತಾಲ್ಲೂಕಿನ ಕಸಬಾ ಹೋಬಳಿಯ ಪುರ ಗ್ರಾಮದಲ್ಲಿ ಶ್ರೀ ಕ್ಷೆತ್ರ ಮಲೆಮದೇಶ್ವರ ಸ್ವಾಮಿ ಬೆಟ್ಟದಲ್ಲಿ 11ನೇ ವರ್ಷದ ಬೆಳದಿಂಗಳ ವಿಶೇಷ ಪೂಜೆ ಕಾರ್ಯಕ್ರಮ ಶ್ರೀ ಕ್ಷೇತ್ರ ಪುರ ಮಲೆ ಮಹದೇಶ್ವರ ದೇವಾಲಯದ ಪ್ರಧಾನ ವ್ಯವಸ್ಥಾಪಕ ಆರ್ಚಕರಾದ ಬಸಪ್ಪ ರವರ ದಿವ್ಯ ಸಾನಿಧ್ಯದಲ್ಲಿ ಮಲೆ ಮಾದೇವಪ್ಪನಿಗೆ ಮುಂಜಾನೆಯಿಂದಲೆ ಸುಪ್ರಭಾತ ಸೇವೆ, ರುದ್ರ ಹೋಮ, ಪಂಚಾಮೃತ ಅಭಿಷೇಕ , ಬೆಣ್ಣೆ ಅಲಂಕಾರ, ಸೇರಿದಂತೆ ವೇದ ಮಂತ್ರಗಳ ಮೂಲಕ ಹುಣ್ಣಿಮೆಯ ವಿಶೇಷ ಪೂಜಾ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ನನ್ನ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರವಾಗಿ ಹೊರಹೊಮ್ಮುತ್ತಿರುವ ಪುರ ಶ್ರೀ ಮಲೆ ಮಾದೇಶ್ವರ ಬೆಟ್ಟದಲ್ಲಿ ಸುಮಾರು 11 ವರ್ಷಗಳಿಂದ ಬೆಳದಿಂಗಳ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಈ ಸುಕ್ಷೇತ್ರ ಅರಣ್ಯ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿಪಡಿಸಲು ಹಲವು ಕಾನೂನು ತೊಡಕುಗಳು ಎದುರಾಗುತ್ತಿವೆ.ಈ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭಕ್ತ ಸಮೂಹ ಹೆಚ್ಚಾಗುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನದ ಮುಖಾಂತರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಶ್ರೀ ಮಲೆ ಮಾದೇಶ್ವರ ಸ್ವಾಮಿಯ ದರ್ಶನ ಪಡೆಯಲು ಚಾಮರಾಜನಗರ ಜಿಲ್ಲೆಯ ಹನೂರು ಪಕ್ಕದ ತಾಳಬೆಟ್ಟಕ್ಕೆ ನೂರಾರು ಕಿಲೋಮೀಟರ್ ದೂರ ಯಾತ್ರೆ ಹೋಗುವ ಸಂದರ್ಭ ನಿರ್ಮಾಣವಾಗಿತ್ತು ಆದರೆ ದೇವಾಲಯದ ವ್ಯವಸ್ಥಾಪಕ ಬಸಪ್ಪ’ರವರ ಪರಿಶ್ರಮ ಮತ್ತು ಈ ಕ್ಷೇತ್ರದ ನೆಲದ ಪವಾಡದಿಂದ ನಮ್ಮ ತಾಲೂಕಿನ ಜನರಿಗೆ ಕೂಗಳತೆ ದೂರದಲ್ಲೇ ಶ್ರೀ ಮಾದಪ್ಪನ ದರ್ಶನ ಪಡೆಯುವ ಭಾಗ್ಯ ದೊರಕಿದೆ ನಾನು ಕೂಡ ಈಗಾಗಲೇ ನಾಲ್ಕನೇ ಬೆಳದಿಂಗಳ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಈ ಕ್ಷೇತ್ರದ ಮಹಿಮೆ ಭಕ್ತರ ಇಷ್ಟಾರ್ಥ ಸಿದ್ದಿ ಕಲ್ಪಿಸುವ ಕೇಂದ್ರ ಸ್ಥಳವಾಗಿ ಕಂಗೊಳಿಸುತ್ತಿದೆ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಮಲೆ ಮಾದೇಶ್ವರ ದೇವಾಲಯದ ಪ್ರಧಾನ ಅರ್ಚಕ ವ್ಯವಸ್ಥಾಪಕ ಬಸಪ್ಪ ಗುರುಗಳು ವಹಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಪುರಸಭಾ ಸದಸ್ಯ ರವೀಂದ್ರ ಬಾಬು, ಕಾಂಗ್ರೆಸ್ ಮುಖಂಡ ಡಾ,ರಾಮಕೃಷ್ಣೇಗೌಡ ಮಾದಾಪುರ, ರೈತ ವಿಜ್ಞಾನಿ ರೋಬೋ ಮಂಜೇಗೌಡ, ಒಕ್ಕಲಿಗ ಸಂಘದ ಮಹಿಳಾ ಅಧ್ಯಕ್ಷೆ ಪ್ರೇಮಕುಮಾರಿ, ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಜಿಲ್ಲಾ ಉಪಾಧ್ಯಕ್ಷೆ ನಳಿನಿ,ಪ್ರಕಾಶ್,ಮೈತ್ರಿ ಡಾಬಾ ಕೋಮನಹಳ್ಳಿ ಮಂಜು, ಮೆಳ್ಳಹಳ್ಳಿ ರವಿ,ಅರ್ಚಕ ರಾಜಣ್ಣ, ಕರೋಟಿ ರಾಮೇಗೌಡ, ಚಂದ್ರೇಗೌಡ, ವಾಟಾಳ್ ನಾಗರಾಜು, ದೇವರಾಜು, ಎಂ.ಕೆ ಯೋಗೇಶ್, ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಶಾಸಕರ ಆಪ್ತ ಸಹಾಯಕ ಮಾಕವಳ್ಳಿ ಕುಮಾರಸ್ವಾಮಿ, ಬಸವರಾಜು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!