ಕೃಷ್ಣರಾಜಪೇಟೆ ತಾಲೂಕಿನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಸಚಿವ ಚಲುವರಾಯಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದ ಚೇತನಾ ಮಹೇಶ್ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಕಾಲಿಕವಾಗಿ ಹೃದಯಾ ಘಾತದಿಂದ ನಿಧನರಾದ ಚೇತನಾಮಹೇಶ್ ಅವರ ನಿವಾಸಕ್ಕೆ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಸಮಾಜ ಸೇವಕ ಮಲ್ಲಿಕಾರ್ಜುನ ಹಾಗೂ ಕೆಪಿಸಿಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ಅವರೊಂದಿಗೆ ಭೇಟಿ ನೀಡಿದ ಸಚಿವ ಚಲುವರಾಯಸ್ವಾಮಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿ ನಿಮ್ಮೊಂದಿಗೆ ನಾನಿದ್ದೇನೆ, ನಿಮ್ಮ ಕಷ್ಟ ಸುಖಗಳಿಗೆ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಮಹೇಶ್ ಅವರ ವಿದ್ಯಾವಂತ ನಿರುದ್ಯೋಗಿ ಪುತ್ರ ಪುತ್ರನಿಗೆ ಉದ್ಯೋಗ ಕೊಡಿಸಿ ಕೊಡುವ ಜವಾಬ್ದಾರಿ ನನ್ನದು, ಧೈರ್ಯವಾಗಿರಿ ಎಂದು ಆತ್ಮವಿಶ್ವಾಸವನ್ನು ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಆರ್.ಟಿ.ಓ ಮಲ್ಲಿಕಾರ್ಜುನ್, ಕೆಪಿಸಿಸಿ ಸದಸ್ಯರಾದ ಕಿಕ್ಕೇರಿ ಸುರೇಶ್, ಮನ್ಮುಲ್ ನಿರ್ದೇಶಕ ಎಂ.ಬಿ. ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ಡಾ.ರಾಮಕೃಷ್ಣೇಗೌಡ, ಕೆ. ಆರ್. ಪುಟ್ಟಸ್ವಾಮಿ, ಹಂಸ ರಮೇಶ್, ಮೈಲಾರಿ ರವಿ, ಮಡವಿನಕೋಡಿ ಕಾಂತರಾಜು, ಮಹಿಳಾ ನಾಯಕಿ ಆದಿಹಳ್ಳಿ ಮೀನಾಕ್ಷಿ ರಮೇಶ್, ಉಧ್ಯಮಿ ಗ್ಯಾಸ್ ರಾಜಶೇಖರ್, ರಾಮ ಪ್ರಸಾದ್, ನಂದಿಪುರ ಜಗದೀಶ್, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು ..
ವಿದ್ಯಾರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಕರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕವೀರರನ್ನಾಗಿ ರೂಪಿಸದೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರೀಕರನ್ನಾಗಿ ಸಜ್ಜುಗೊಳಿಸಬೇಕು. ಡಾ.ಪಿ. ಹರೀಶ್ ಕರೆ.