ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿ–66ರ ಕ್ವಾಲಿಟಿ ಹೋಟೆಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೋಟಾರ್‌ಸೈಕಲ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಕುಂದಾಪುರದಿಂದ ಹೊನ್ನಾವರದತ್ತ ಟ್ಯಾಂಕರ್ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದ ಪರಿಣಾಮ, ರಸ್ತೆ ತಿರುವಿನಲ್ಲಿ ಭಟ್ಕಳ ಸರ್ಕಲ್‌ನಿಂದ ಸರ್ಪನಕಟ್ಟಾ ಕಡೆಗೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಪರಮೇಶ್ವರ ಮಾದೇವ ನಾಯ್ಕ (37), ಬೆಣ್ದೂರ ಯಲ್ಲೋಡಿ ಕೌರ ನಿವಾಸಿ, ಇವರಿಗೆ ಬಲಕಾಲಿನ ಮೊಣಕಾಲಿನ ಕೆಳಭಾಗದಲ್ಲಿ ಮೂಳೆ ಮುರಿತವಾಗಿದ್ದು, ಜೊತೆಗೆ ಬಲಗೈ, ಭುಜ ಹಾಗೂ ಹಣೆಗೆ ರಕ್ತಗಾಯಗಳೊಂದಿಗೆ ಒಳನೋವುಗಳು ಉಂಟಾಗಿವೆ.
ಗಾಯಾಳುವನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಉಡುಪಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತಕ್ಕೆ ಕಾರಣನಾದ ಟ್ಯಾಂಕರ್ ಚಾಲಕ ಹುನಗುಂದ ನಿವಾಸಿ ಪ್ರಶಾಂತ ಮಹಾಂತೇಶ ವಾಲಿಕರ (25) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ