ಹೊನ್ನಾವರ: ಸ್ನೇಹಮಯವಾಗಿ 40 ವರ್ಷ ಮೇಲ್ಪಟ್ಟವರು ಇತರೆ ಟೂರ್ನಿಗಳಿಗೆ ಮಾದರಿ ಎನ್ನುವಂತೆ ಕ್ರಿಕೇಟ್ ಪಂದ್ಯಾವಳಿ ಅರೇಅಂಗಡಿ ಗೆಳೆಯರ ಬಳಗದವರು ಆಯೋಜಿಸಿದ್ದರು ಎಂದು ಪ್ರಖ್ಯಾತ ತಾಳಮದ್ದಳೆ ಕಲಾವಿದರಾದ ಗೋಪಾಲಕೃಷ್ಣ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಎಸ್.ಕೆಪಿ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಗೆಳೆಯರ ಬಳಗ ಅರೇಅಂಗಡಿ ಇವರು ಆಯೋಜಿಸಿದ 40 ವರ್ಷ ಮೇಲ್ಪಟ್ಟವರ ಕ್ರಿಕೇಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಲಿದೆ ಎನ್ನುವುದನ್ನು ಮೂರು ದಿನಗಳ ಪಂದ್ಯಾವಳಿಯಲ್ಲಿ ನೋಡಿದ್ದೇವೆ. ಸೌಹಾರ್ದಯುತವಾಗಿ ಆಯೋಜಿಸಿದ ಪಂದ್ಯಾವಳಿಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ವಿಶೇಷ ಪಂದ್ಯ ಆಯೋಜಿಸಿದ ವಿನೂತನ ಪ್ರಯೋಗ ಉತ್ತಮ ನಡೆಯಾಗಿದೆ. ಭವಿಷ್ಯದ ಕ್ರಿಕೇಟ್ ಪಟು ನಿರ್ಮಾಣದಲ್ಲಿ ಈ ಕಾರ್ಯವು ಸಹಕಾರಿಯಾಗಲಿದೆ ಎಂದರು.

ಹಿರಿಯ ಕ್ರಿಕೇಟ್ ಆಟಗಾರರಾದ ರಘು ಭಟ್ ಮತ್ತು ಇಮ್ತಿಯಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೂರ್ನಿಯಲ್ಲಿ ಸುಭಾಸ ಭಂಡಾರಿ ಮಾಲಿಕತ್ವದ ಕಿಂಗ್ಸ್ ಇಲೆವನ್ ತಂಡ ಚಾಂಪಿಯನ್ ಆಗಿ, ವಿಜಲ್ಡ್ ರನ್ನರ್ ಅಫ್ ಪ್ರಶಸ್ತಿ ಮುಡಿಗೇರಿಸಿಕೊಂಡರು. 16 ವರ್ಷದೊಳಗಿನ ಪಂದ್ಯದಲ್ಲಿ ಮಯೂರ ಹೆಗಡೆ ಪ್ರಥಮ, ಶ್ರೀರಾಮ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.
ವೇದಿಕೆಯಲ್ಲಿ ಕಂದಾಯ ಇಲಾಖೆಯ ವೆಂಕ್ರಟಮಣ ದೇವಾಡಿಗ, ಗ್ರಾ.ಪಂ.ಸದಸ್ಯ ಗಣಪತಿ ಭಟ್, ವಿಶ್ವನಾಥ ಹೆಗಡೆ, ಟಿ ಜಿ ಹೆಗಡೆ, ಶ್ರೀಧರ ಹೆಗಡೆ ಕಲ್ಬಾಗ, ಚಂದ್ರಕಾಂತ ನಾಯ್ಕ ಇದ್ದರು.

More Stories
ಹೊನ್ನಾವರದಲ್ಲಿ ಸಂಭ್ರಮದ “ಪತ್ರಿಕಾ ದಿನಾಚರಣೆ”: ಸಾಧಕರಿಗೆ ಸನ್ಮಾನ; ಮಾಧ್ಯಮದ ಸವಾಲುಗಳ ಕುರಿತು ಗಂಭೀರ ಚಿಂತನೆ
ಹೊನ್ನಾವರದ ಯುವಕನ ಜಾಗತಿಕ ಸಾಧನೆ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಿಂಚಿ NVIDIA ಕಂಪನಿಯಲ್ಲಿ ವಾರ್ಷಿಕ ₹2.60 ಕೋಟಿ ಪ್ಯಾಕೇಜ್ ಪಡೆದ ಪೃಥ್ವಿರಾಜ್!
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ: ಸುರಕ್ಷತೆ ಬಗ್ಗೆ ದೇವರಾಜ ಅರಸು ವಿಚಾರ ವೇದಿಕೆ ತೀವ್ರ ಕಳವಳ