March 4, 2026

ಶಬರಿಮಲೆಯಲ್ಲಿ ಶರಾವತಿ ಪಂಪ್ ಸ್ಟೋರೇಜ್ ವಿರೋಧಿಸಿ ಪೋಸ್ಟರ್ ಅಭಿಯಾನ

ಹೊನ್ನಾವರ: ತಾಲೂಕಿನ ಮೂಡ್ಕಣಿಯ ಅಯ್ಯಪ್ಪ ಭಕ್ತ ಮಂಡಳಿಯ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದು, ಶಬರಿಮಲೆ ಅಯ್ಯಪ್ಪನ ಸನ್ನಿದಿಯಲ್ಲಿಯ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧ ಪೋಸ್ಟರ್ ಅಭಿಯಾನ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಬಂದ್ ಆಗಬೇಕು ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೆಷಲಿಸ್ಟ ಆಸ್ಪತ್ರೆ ಆಗಬೇಕು ಎಂದು ಅಯ್ಯಪ್ಪ ಭಕ್ತ ಮಂಡಳಿ ಮೂಡ್ಕಣಿ ಎಲ್ಲಾ ಸ್ವಾಮಿಗಳು ಸೇರಿ ಏರುಮಲೆಯಿಂದ ಶಬರಿಮಲೆ ತನಕ 56 ಕಿ. ಮೀ ಪಾದ ಯಾತ್ರೆಯಲ್ಲಿ ಪೋಸ್ಟರ್ ಅಭಿಯಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಲಧಾರಿಗಳಾದ ವಿಘ್ನೇಶ್ವರ, ವಿನಾಯಕ, ಮೇಘರಾಜ್, ಪ್ರಶಾಂತ, ನಾಗೇಶ್, ರಾಘವೇಂದ್ರ, ಶ್ರೀರಾಮ, ಗಜಾನನ, ಮಾರುತಿ, ಗಣಪತಿ, ಶ್ರಜನ್ ಸೇರಿ ಒಟ್ಟು ಒಟ್ಟು ಹದಿನಾಲ್ಕು ಸ್ವಾಮಿಗಳು ಇದ್ದರು.

About The Author

error: Content is protected !!