ಭಟ್ಕಳ: ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಜ.೨೪ರಂದು ಶನಿವಾರ ಸಂಜೆ ಶ್ರೀ ಮಹಾ ಮುರುಡೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.
ಶ್ರೀಗಳನ್ನು ಶ್ರೀ ದೇವಸ್ಥಾನದ ಪರವಾಗಿ ಆರ್.ಎನ್.ಎಸ್. ಟ್ರಸ್ಟ್ನ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಪ್ರಧಾನ ಅರ್ಚಕರಾದ ಶಿವರಾಮ ಅಡಿಗಳ್, ಜಯರಾಮ ಅಡಿಗಳ್, ಸತೀಶ ಶಿವರಾಮ ಭಟ್ಟ ದಂಪತಿಗಳು, ಉಪಾದಿವಂತರು, ಹವ್ಯಕ ವಲಯದ ಅಧ್ಯಕ್ಷ ಎಂ.ವಿ.ಹೆಗಡೆ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿ ಎಸ್.ಎಂ.ಭಟ್ಟ, ಖಜಾಂಚಿ ಪ್ರಕಾಶ ಭಟ್ಟ, ಮಂಡಳಿದ ಪ್ರಮುಖರಾದ ರೇಷ್ಮಾ ಯೋಗೀಶ ಭಟ್ಟ, ಕಿತ್ರೆ ದೇವಿಮನೆ ದೇವಸ್ಥಾನದ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಗುರಿಕಾರರಾದ ವೆಂಟ್ರಮಣ ಹೆಗಡೆ, ಪ್ರಮುಖರಾದ ಬಲ್ಸೆ ಕೃಷ್ಣಾನಂದ ಭಟ್ಟ ದಂಪತಿಗಳು, ನೀಲಕಂಠ ಉಪಾಧ್ಯಾಯ, ಪಿ.ಎನ್. ಭಟ್ಟ, ವೆಂಕಟ್ರಮಣ ಹೆಗಡೆ, ಹಟ್ಟಿಯಂಗಡಿ ದೇವಸ್ಥಾನದ ಅರ್ಚಕ ಬಾಲಚಂದ್ರ ಭಟ್ಟ, ಯೋಗೀಶ ಭಟ್ಟ, ಗಣೇಶ ಯಾಜಿ, ಸತೀಶ ಭಟ್ಟ ಸೇರಿದಂತೆ ನೂರಾರು ಜನರು ಸ್ವಾಗತಿಸಿದರು. ಶ್ರೀಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮಹಾಗಣಪತಿ, ಮೃಡೇಶ ಹಾಗೂ ಪರಿವಾರ ದೇವತೆಗಳ ದರ್ಶನ ಪಡೆದರು. ನಂತರ ಶ್ರೀ ಮಹಾ ಮುರ್ಡೇಶ್ವರ ದೇವಸ್ಥಾನದ ವತಿಯಿಂದ ಸತೀಶ ಭಟ್ಟ ದಂಪತಿಗಳು ಧೂಳೀ ಪೂಜೆ ನೆರವೇರಿಸಿದರು.
ರವಿವಾರ ಬೆಳಗ್ಗೆ ಶ್ರೀ ರಾಮದೇವರ ಪೂಜೆ, ಶ್ರೀ ಮೃಡೇಶ ದೇವರ ಪೂಜೆ ನೆರವೇರಿಸಿದ ಶ್ರೀಗಳು ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.

More Stories
ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ
ಮುರ್ಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ರೂಮ್ ಬಾಯ್ ಬಂಧನ
ಮುರುಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಸಾವಿರಾರು ಭಕ್ತರ ದಂಡು – ಕಳೆದುಕೊಂಡವರನ್ನು ಪತ್ತೆ ಹಚ್ಚಿದ ಪೊಲೀಸರು