ಹೊನ್ನಾವರ: ಸರ್ಕಾರಿ ಶಾಲೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನಿಡುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಹೇಳಿದರು.
ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಕಟ್ಟಡ ಮತ್ತು ಶಿಕ್ಷಕರ ಬೇಡಿಕೆಯಿದೆ. ಇಲಾಖೆಯು ಸರ್ಕಾರಿ ಶಾಲೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದೆ. ಈ ಶಾಲೆಯು ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ನಾವು ಸಮಸ್ಯೆಯ ಭಾಗವಾಗಬಾರದು, ಸಮಸ್ಯೆಗೆ ಪರಿಹಾರವಾಗಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ ಮಾತನಾಡಿ, ಸಾಧನೆ ಮಾಡಿರುವ ಪ್ರತಿಭಾವತಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು ಎಂದರು.
ದಂತ ವೈದ್ಯ ಡಾ. ನಾಗರಾಜ ಬೋಸ್ಕಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಲೇಷ್ಯಾದಲ್ಲಿ ಅಂತರರಾಷ್ಟಿçÃಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ೫ನೇ ತರಗತಿ ವಿದ್ಯಾರ್ಥಿ ಶ್ರೇಯಿತ್ ನಾಗೇಂದ್ರ ಮೇಸ್ತ ನನ್ನು ಸನ್ಮಾನಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಹಸ್ತ ಪತ್ರಿಕೆ, ಚಿತ್ರ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಬಹುಮಾನ ವಿತರಿಸಲಾಯಿತು.
ಹ್ರದಯ ತಜ್ಞ ಡಾ. ಆಶಿಕ್ ಹೆಗ್ಡೆ, ದೃಶ್ಯ ಮಾಧ್ಯಮ ಸಂಯೋಜಕ ಜಗದೀಶ ಭಾವೆ, ಉದ್ಯಮಿ ಪುರುಷೋತ್ತಮ ಮೇಸ್ತ, ವಕೀಲ ವಿಕ್ರಮ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ತಾಲೂಕು ಉಪಾಧ್ಯಕ್ಷೆ ಲಕ್ಷ್ಮೀ ಎಚ್., ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೇಸ್ತ, ಉಪಾಧ್ಯಕ್ಷೆ ಜಯಾ ಗಡಕರ, ಸಿಆರ್‌ಪಿ ಪ್ರಕಾಶ ಶೇಟ್, ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯಾಧ್ಯಾಪಕ ಎಂ.ಜಿ.ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಬು ನಾಯ್ಕ ವಂದಿಸಿದರು. ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.
ವರದಿ: ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಹೊನ್ನಾವರದಲ್ಲಿ ಸಂಭ್ರಮದ “ಪತ್ರಿಕಾ ದಿನಾಚರಣೆ”: ಸಾಧಕರಿಗೆ ಸನ್ಮಾನ; ಮಾಧ್ಯಮದ ಸವಾಲುಗಳ ಕುರಿತು ಗಂಭೀರ ಚಿಂತನೆ
ಹೊನ್ನಾವರದ ಯುವಕನ ಜಾಗತಿಕ ಸಾಧನೆ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಿಂಚಿ NVIDIA ಕಂಪನಿಯಲ್ಲಿ ವಾರ್ಷಿಕ ₹2.60 ಕೋಟಿ ಪ್ಯಾಕೇಜ್ ಪಡೆದ ಪೃಥ್ವಿರಾಜ್!
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ: ಸುರಕ್ಷತೆ ಬಗ್ಗೆ ದೇವರಾಜ ಅರಸು ವಿಚಾರ ವೇದಿಕೆ ತೀವ್ರ ಕಳವಳ