March 1, 2026

ಕಾರ್ಕಳ ಗುತ್ತುಕರೆಯಲ್ಲಿ ನೇಮೋತ್ಸವ

ಕಾರ್ಕಳ :ತಾಲೂಕಿನ ಕುಕ್ಕುಂದೂರು ಗುತ್ತು ಕರೆಯ ಪಿಲಿಚಂಡಿ, ಬೊಬ್ಬರ್ಯ, ಗುಳಿಗ ಹಾಗೂ ನೀಚ ದೈವಗಳ ನೇಮ ವರ್ಷಂಪ್ರತಿ ಯಂತೆ ದಿನಾಂಕ 07-02-2026 ರಂದು ಶನಿವಾರ ರಾತ್ರಿ 8 ರಿಂದ 9 ರ ತನಕ ಅನ್ನ ಸಂತರ್ಪಣೆ ನಡೆಯಿತು. ನಂತರ ದೈವಗಳ ನೇಮ ವಿಜೃಂಭಣೆಯಿಂದ ನಡೆಯಿತು.

ವಸಂತ್ ರಾಜ್ ಗುತ್ತು ಮನೆ, ರವೀಂದ್ರ ಶೆಟ್ಟಿ ಪಡುಮನೆ, ವಿಶ್ವನಾಥ ಶೆಟ್ಟಿ ದುಗ್ಗನಬೆಟ್ಟು, ಹಾಗೂ ಕುಕ್ಕುಂದೂರು ಗ್ರಾಮದ ಹತ್ತು ಸಮಸ್ತರು, ತಾಲೂಕು ಗುಡ್ಡೆ ಪರಪು ಗುಡ್ಡೆ, ಕಾರ್ಕಳ. ಭಕ್ತಾದಿಗಳು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

ವರದಿ : ಅರುಣ ಭಟ್ಟ್  ಕಾರ್ಕಳ

About The Author

error: Content is protected !!