March 1, 2026

ಔತಣ ಕೂಟದಲ್ಲಿ ವಿ.ಡಿ.ನಾಯಕರಿಗೆ ಗೌರವಾರ್ಪಣೆ


ಅಂಕೋಲಾ : ನವ ಕರ್ನಾಟಕ ಸಂಘ ಹಾಗೂ ಶ್ರೀರಾಮ್ ಸ್ಟಡಿ ಸರ್ಕಲ್ ನ ಬಾಪು ಸದ್ಭಾವನಾ ಪುರಸ್ಕಾರ ಪುರಸ್ಕೃತ ವಿಶ್ರಾಂತ ಅಧ್ಯಾಪಕರಾದ ನಾಡುಮಾಸ್ಕೇರಿ ವಿ.ಡಿ.ನಾಯಕ ವಂದಿಗೆಯವರು ಆಯೋಜಿಸಿದ ಔತಣ ಕೂಟದಲ್ಲಿ ಅವರನ್ನು ವಿವಿಧ ಸಂಘಟನೆಗಳಿಂದ ಗೌರವಿಸಲಾಯಿತು.
ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಕನ್ನಡ ಭಾರತಿ ಪ್ರಪಂಚದ ಸಂಚಾಲಕರಾದ ನಾರಾಯಣ ನಾಗು ನಾಯಕ,ಕನ್ನಡ ಚಂದ್ರಮ ಉತ್ತರ ಕನ್ನಡದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರ, ದಿನಕರ ಪ್ರತಿಷ್ಠಾನದಿಂದ ಪ್ರೊ. ಮೋಹನ ಹಬ್ಬು ಹಾಗೂ ಡಾ. ರಾಮಕೃಷ್ಣ ಗುಂದಿ, ಅಂಕೋಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ನಾಗೇಶದೇವ ಅಂಕೋಲೇಕರ,ಅಂಕೋಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯಕ, ವಿಶ್ರಾಂತ ಶಿಕ್ಷಕ ಜಿ. ಆರ್. ನಾಯಕ, ಅಂಕೋಲಾದ ನವ ಕರ್ನಾಟಕ ಸಂಘದ ಕಾರ್ಯದರ್ಶಿ ಸೂರಜ ಅರವಿಂದ ಹಾಗೂ ಶ್ರೀರಾಮ್ ಸ್ಟಡಿ ಸರ್ಕಲ್ ನ ಅಧ್ಯಕ್ಷರಾದ ಎ. ಎಲ್. ನಾಯಕ ಮೊದಲಾದವರು ವಿ.ಡಿ.ನಾಯಕರನ್ನು ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ನವ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು, ಎಂಬತ್ನಾಲ್ಕು ವಸಂತಗಳ ಸಾರ್ಥಕ ಬದುಕನ್ನು ಕಂಡ ವಿ.ಡಿ.ನಾಯಕ ಮಾಸ್ತರರೊಳಗಿನ ಅದ್ಭುತವಾದ ಮನುಷ್ಯನ ಸಮಾಜಮುಖಿಯಾದ ಮಿಡಿತ – ತುಡಿತಗಳಲ್ಲಿನ ಸಾಕ್ಷಿ ಪ್ರಜ್ಞೆಯಾಗಿರುವ ಸಮಾರಾಧನೆಯ ಸಂತೃಪ್ತಿಯ ಬಲದಲ್ಲಿ ಅವರು ಶತಾಯುವಾಗಲಿ ಎಂದರು.


ಕನ್ನಡ ಚಂದ್ರಮದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿಯವರು ಸ್ವಾಗತಿಸಿ – ವಂದಿಸಿದರು. ಕಥೆಗಾರ – ಯಕ್ಷ ನಟ – ವಿಶ್ರಾಂತ ಪ್ರಾಚಾರ್ಯರಾದ ಡಾ. ಆರ್. ಜಿ. ಗುಂದಿಯವರು ವಿ.ಡಿ.ನಾಯಕರ ಸಜ್ಜನಿಕೆಯ ಗುಣಗಾನವನ್ನು ಮಾಡಿದರು.
ಭಟ್ಕಳದ ಅಂಜುಮನ್ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ. ಆರ್. ಎಸ್. ನಾಯಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಧ್ಯಕ್ಷರಾದ ಶಿವಚಂದ್ರ, ಲಾ. ಗಣಪತಿ ಶೀಳ್ಯ, ವೆಂಕಣ್ಣ ಮಾಸ್ತರ್, ಧರ್ಮದರ್ಶಿ ಶ್ರೀನಿವಾಸ ಬೇಲೇಕೇರಿ, ರಾಮಚಂದ್ರ ಶಿರಗುಂಜಿ,ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸುಧೀರ ನಾಯಕ ಯಕ್ಷಮುಖಿಯ ಸಂಚಾಲಕರಾದ ರಾಜೇಶ ನಾಯಕ ಸೂರ್ವೆ ಹಾಗೂ ಸ್ನೇಹಜೀವಿ ರಾಜೇಂದ್ರ ಕೇಣಿ ಮೊದಲಾದವರಿದ್ದರು.

About The Author

error: Content is protected !!