March 1, 2026

ಮಿರ್ಜಾನ್ ಶಾಲೆಗೆ ಒಂದು ಲಕ್ಷ ಹನ್ನೊಂದು ಸಾವಿರ ಕೊಡುಗೆ ನೀಡಿದ ಸೀಮಾ ಶರ್ಮ


ಕುಮಟಾ : ಅಮೇರಿಕಾದಲ್ಲಿ ನೆಲೆಯಾದ ಮೂಲತಃ ತಾಲ್ಲೂಕಿನ ಮಿರ್ಜಾನದವರಾದ ಸೀಮಾ ಶರ್ಮಾರವರು ಹುಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲೂಕ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರ ಮನವಿಗೆ ಸ್ಪಂದಿಸಿ ರೂ. 1,11,000 /-ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.


ಇವರು ಕಂದಹಾರ ವಿಮಾನ ಅಪಹರಣದಲ್ಲಿ ಆತಂಕವಾದಿಗಳ ಗುಂಡೇಟಿಗೆ ಹುತಾತ್ಮರಾದ ಆರ್ ಆರ್ ನಾಯ್ಕರವರ ಸುಪುತ್ರಾಗಿದ್ದು, 20 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕಲಿಕೆಯ ಸಂಪೂರ್ಣ ವೆಚ್ಚವನ್ನು ಬರಿಸುತ್ತಲೇ ಶಿಕ್ಷಣಾಭಿಮಾನವನ್ನು ಮೆರೆಯುತ್ತಲೇ ಬಂದಿರುತ್ತಾರೆ.


ಇವರ ಕೊಡುಗೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ನಾಯ್ಕರವರು ಶ್ಲಾಘಿಸಿದ್ದಾರೆ.
ಸೀಮಾ ಶರ್ಮಾರವರ ಸಜ್ಜನಿಕೆಯ ಕಾರ್ಯಕ್ಕೆ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿ, ಸೇವಾಲಾಲ್ ಸಂಘದ ಅಧ್ಯಕ್ಷರಾದ ಶಿವಚಂದ್ರ, ಡಾ. ಆರ್ ಎಂ ಕುಬೇರಪ್ಪ ಅಭಿಮಾನಿ ಬಳಗದ ಉತ್ತರ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ವಿಜಯಕುಮಾರ್ ಹಾಗೂ ಅಧ್ಯಕ್ಷರಾದ ಆರ್ ಜೆ ನಾಯ್ಕ್ ಕಣ್ಮಣಿ ಮೊದಲಾದವರು ಅಭಿನಂದಿಸಿದ್ದಾರೆ.

About The Author

error: Content is protected !!