ಭಟ್ಕಳ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕಾರು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.
ಕುಂದಾಪುರ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಕಾರು, ಭಟ್ಕಳ ಪುರವರ್ಗ ಚರ್ಚ್ ಎದುರು ರಸ್ತೆ ತಲುಪಿದಾಗ ವೇಗ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಇದೇ ವೇಳೆ ಭಟ್ಕಳ ಕಡೆಯಿಂದ ಚರ್ಚ್ ಕಡೆಗೆ ಹೋಗಲು ಇಂಡಿಕೇಟರ್ ಹಾಕಿ ನಿಧಾನವಾಗಿ ರಸ್ತೆ ದಾಟುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರ ಅಂಥೋನ್ ತಂದೆ ಸಾವೇರ್ ಫರ್ನಾಂಡಿಸ್ (ಎಎಸ್ಐ, ಡಿ.ಪಿ. ಕಾಲೋನಿ, ಭಟ್ಕಳ) ಅವರಿಗೆ ಎಡಗಾಲಿನ ಪಾದದ ಬಳಿ, ಹಣೆಗೆ ಹಾಗೂ ಬಲಗೈಗೆ ರಕ್ತಗಾಯಗಳಾಗಿವೆ. ಹಿಂಬದಿ ಕುಳಿತಿದ್ದ ಶ್ರೀಮತಿ ಜೋಸ್ಟೀನ್ ಕೋಂ ಅಂಥೋನ್ ಫರ್ನಾಂಡಿಸ್ ಅವರಿಗೆ ಎಡಗೈ ಭುಜಕ್ಕೆ ಒಳನೋವು, ತಲೆಗೆ ರಕ್ತಗಾಯ ಹಾಗೂ ಬಲಗಾಲಿಗೆ ಒಳನೋವು ಉಂಟಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಾರು ಚಾಲಕಿ ಧನ್ಯ ರಘುಪತಿ ಹೆಗಡೆ (ಗಣೇಶ ನಗರ, ಶಿರಸಿ) ವಿರುದ್ಧ ಫ್ರಾನ್ಸಿಸ್ ತಂದೆ ಬಸ್ಸಾಂವ ಡಿಸೋಜಾ ಅವರು ಭಟ್ಕಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

More Stories
ಭಟ್ಕಳದಲ್ಲಿ ಶಾಲಾ ಮಕ್ಕಳನ್ನ ಸಾಗಿಸುತ್ತಿದ್ದ ವಾಹನ ಪಲ್ಟಿ: 13 ವಿದ್ಯಾರ್ಥಿಗಳಿಗೆ ಸಣ್ಣ ಗಾಯ
ಭಟ್ಕಳದಲ್ಲಿ ಸಂಭ್ರಮದ ಹೋಳಿ ಹಬ್ಬ
ಬ್ಯಾಂಕ್ ದಾಖಲೆ ಪಡೆದು ವಂಚನೆ: ಠಾಣೆಯಲ್ಲಿ ಪ್ರಕರಣ