ಮುರುಡೇಶ್ವರ : ಆರ್ .ಎನ್. ಎಸ್. ರೂರಲ್ ಪಾಲಿಟೆಕ್ನಿಕ್ ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಎಂಎಸ್ ಎಮ್ಇ ನಿರ್ದೇಶನಾಲಯ, ಕೆ. ಸಿ. ಟಿ.ಯು. , ಟೆಕ್ಸಾಕ ಬೆಂಗಳೂರು, ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಬೆಂಗಳೂರು , ಆರ್.ಎ.ಎಮ್.ಪಿ ಯೋಜನೆ ಕಾರವಾರ ಹಾಗೂ ಜಿಲ್ಲಾ ಕೈಗಾರಿಕೆ ಕೇಂದ್ರ ಕಾರವಾರ, ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉಸಿರಾ ಇಂಡಸ್ಟ್ರೀಸ್ ನ ಉದ್ಯಮಿ ಎಂ. ಡಿ . ಮ್ಯಾಥ್ಯೂ ಉದ್ಘಾಟಿಸಿ ಮಾತನಾಡುತ್ತಾ , ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಯುವಜನತೆ ಉದ್ಯೋಗ ಅರಸಿ ಬೇರೆ ಊರಿಗೆ ವಲಸೆ ಹೋಗದೆ ತಮ್ಮ ಅನುಭವದ ಜೊತೆಗೆ ಆಧುನಿಕ ಕೌಶಲ್ಯದ ಅನುಭವ ಪಡೆದು ಉದ್ಯಮವನ್ನು ಈ ಭಾಗದಲ್ಲಿ ತೆರೆದು ನಿರುದ್ಯೋಗ ಯುವಜನಕ್ಕೆ ಉದ್ಯೋಗ ನೀಡುವಂಥವರಾಗಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಅರವಿಂದ ಬಾಳೇರಿ , ನಿವೃತ್ತ ಜಂಟಿ ನಿರ್ದೇಶಕರು, ಕೌಶಲ್ಯ ಭಾರತ ಮತ್ತು ಜಿಲ್ಲಾ ಕೈಗಾರಿಕೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಂಗಳೂರು ಇವರು ಮಾತನಾಡುತ್ತಾ,, ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನವ ಉದ್ಯಮಿಗಳು ಆಧುನಿಕ ಕೌಶಲ್ಯವನ್ನು ಅಳಿವಡಿಸಿಕೊಂಡು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡು, ಉತ್ಪಾದನೆಯ ವೇಗದ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂಥವರಾಗಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಂಪ್ ಯೋಜನೆ ಬಗ್ಗೆ ಸುನಿಲ್ ನಾಯಕ್ ವಿವರಿಸಿದರು. ವ್ಯಕ್ತಿತ್ವ ವಿಕಸನದ ಬಗ್ಗೆ ಮಡಿಕೇರಿಯಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಆರ್. ಕೆ. ಬಾಲಚಂದ್ರ ಅವರು ಸವಿವರವಾಗಿ ಮಾತನಾಡಿದರು. ಅಕ್ವಾಮರೈನ್ ಇನ್ಕುಬೇಷನ್ ಕೇಂದ್ರ ನಿಟ್ಟೆಯ ಮುಖ್ಯಸ್ಥರಾದ ಆಶಿಕ್ ಶೆಟ್ಟಿ ಸರ್ಕಾರದ ಯೋಜನೆ ಬಗ್ಗೆ ವಿವರವಾಗಿ ತಿಳಿಸಿದರು .
ಉಡುಪಿ ಸಿಡಾಕ್ನ ಪೃಥ್ವಿರಾಜ್ ಉಪಸ್ಥಿತರಿದ್ದರು. ಮುರ್ಡೇಶ್ವರ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾದ ಸಂತೋಷ್ ಆರ್ .ಎ . ಎಲ್ಲರನ್ನ ಸ್ವಾಗತಿಸಿದರು, ಕುಮಾರಿ ನಾಗವೇಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು , ಕಾರ್ಯಕ್ರಮ ನಿರೂಪಣೆಯನ್ನು ಉಡುಪಿ ಸಿಡಾಕ್ನ ಶೃತಿ ಮಾಡಿದರು , ಮುರುಡೇಶ್ವರ ಪಾಲಿಟೆಕ್ನಿಕ್ ನ ಉಪ ಪ್ರಾಚಾರ್ಯರಾದ ಕೆ . ಮರಿಸ್ವಾಮಿ ಯವರು ವಂದಿಸಿದರು.

More Stories
ಮುರ್ಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ರೂಮ್ ಬಾಯ್ ಬಂಧನ
ಮುರುಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಸಾವಿರಾರು ಭಕ್ತರ ದಂಡು – ಕಳೆದುಕೊಂಡವರನ್ನು ಪತ್ತೆ ಹಚ್ಚಿದ ಪೊಲೀಸರು
ಮುರುಡೇಶ್ವರದಲ್ಲಿ ಮಹಾಶಿವರಾತ್ರಿ-2026: ಕ್ಯೂಆರ್ ಕೋಡ್ ಬ್ಯಾನರ್ ಬಿಡುಗಡೆ