ಹೋನ್ನಾವರ: ಶರಾವತಿ ಪಂಪ್ಡ ಸ್ಟೋರೇಜ ಯೋಜನೆಗೆ ಅನುಮತಿ ನೀಡುವುದು ಬೇಡವೆಂದು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ತಜ್ಞರ ತಂಡವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಆದ್ದರಿಂದ ಪಂಪ್ಡ ಸ್ಟೋರೇಜ ಯೋಜನೆಗೆ ನೀಡಿರುವ ತಾತ್ವಿಕ ಒಪ್ಪಿಗೆಯನ್ನು ಕೂಡಲೇ ಹಿಂಪಡೆಯಬೇಕೆಂದು ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು ಪಂಪ್ಡ ಸ್ಟೋರೇಜ ಯೋಜನೆಯ ವಿರುದ್ಧ ನಮ್ಮಹೊನ್ನಾವರ ಮತ್ತು ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಯವರು ಸೇರಿ ಜಂಟಿಯಾಗಿ ಕಾರ್ಯ ತಂತ್ರ ರೂಪಿಸಿ ಹೋರಾಟ ನಡೆಸುತ್ತಿದ್ದೇವೆ.
ನಮ್ಮೊಂದಿಗೆ ರಾಜ್ಯದಾದ್ಯಂತ ವಿವಿಧ ಸಂಘಟನೆಗಳು ಸೇರಿ ಹಲವು ವರ್ಷಗಳಿಂದ ರಾಜ್ಯಾದ್ಯಂತ ಸಂಘಟಿತ ಹೋರಾಟ ನಡೆಸುತ್ತಿವೆ. ಯೋಜನೆಯ ವಿರುದ್ಧ ಕೇಂದ್ರ ಮತ್ತು ರಾಜ್ಯಸರಕಾರಕ್ಕೆ ಹಲವುಬಾರಿ ಆಕ್ಷೇಪಣೆ ಸಲ್ಲಿಸಲಾಗಿತ್ತು.ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ, ತಜ್ಞರ ತಂಡವನ್ನು ನ್ಯೇಮಕಮಾಡಿತ್ತು.ರಾಷ್ಟ್ರೀಯ ವನ್ಯ ಜೀವಿಮಂಡಳಿಯ ಡಾ.ಎಚ್.ಎಸ್.ಸಿಂಗ್,ಪ್ರೋ.ರಾಮನ್ ಸುಕುಮಾರನ್,ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಹಾನಿರ್ದೇಶಕ ಶಿವಕುಮಾರ ಅವರನ್ನು ಒಳಗೊಂಡ ತಜ್ಞರ ಸಮಿತಿಯು ಡಿಸಂಬರ್ 27ರಿಂದ 30ರ ವರೆಗೆ ಯೋಜನಾ ಪ್ರದೇಶದಲ್ಲಿ ಸುತ್ತಾಡಿ,ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿದೆ ಹಾಗೂ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ ಪರಿಸರ ಸಚಿವಾಲಯಕ್ಕೆ 42ಪುಟಗಳ ವರದಿ ಸಲ್ಲಿಸಿದೆ.
ಕೇಂದ್ರದ ತಜ್ಞರ ತಂಡ ಶರಾವತಿ ಕೊಳ್ಳಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಶಾಸಕ ದಿನಕರ ಕೆ.ಶೆಟ್ಟಿ,ಚಂದ್ರಕಾಂತ ಕೊಚರೇಕರ ಮತ್ತು ಮಾರೂತಿ ಗುರೂಜಿಯವರ ನೇತ್ರತ್ವದ ನಮ್ಮ ಹೋರಾಟ ಸಮಿತಿಯ ಎರಡು ನಿಯೋಗಗಳು ಕೇಂದ್ರ ತಜ್ಞರ ತಂಡವನ್ನು ಭೇಟಿಮಾಡಿ ಯೋಜನೆಯಿಂದ ಪಶ್ಚಿಮಘಟ್ಟದ ಪರಿಸರಕ್ಕೆ,ನದಿಕೊಳ್ಳದ ಸುರಕ್ಷತೆಗೆ,ಜೀವನದಿ ಶರಾವತಿಯ ಅಸ್ತಿತ್ವಕ್ಕೆ ಹಾಗೂ ಮುಂದಿನ ಪೀಳಿಗೆಯ ಜನರ ಸುರಕ್ಷತೆಗೆ ತಾಲ್ಲೂಕಿನ ಕ್ರಷಿ ಚಟುವಟಿಕೆಯ ಮೇಲೆ ಮತ್ತು ಪ್ರಮುಖ ಮೂರುತಾಲೂಕುಗಳ ಕುಡಿಯುವ ನೀರಿನ ಅಗತ್ಯ ಸೇವೆಗಳ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳ ಕುರಿತು ತಜ್ಞರ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು ಹಾಗೂ ವಿವಿಧ ಯೋಜನೆಗಳಿಂದ ಜರ್ಜರಿತವಾಗಿರುವ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಕೇಂದ್ರ ಸರ್ಕಾರ ಪಂಪ್ಡ ಸ್ಟೋರೇಜ ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಮತ್ತು ಯೋಜನೆಯ ಅನುಷ್ಠಾನದ ವಿರುದ್ಧ ರಾಜ್ಯ ಸರ್ಕಾರಕ್ಕೆ ತೀವ್ರ ಆಕ್ಷೇಪಣೆಯನ್ನು ಸಲ್ಲಿಸಲಾಗಿತ್ತು. ನಾವು ಗಮನ ಸೆಳೆದಿರುವ ಎಲ್ಲ ಅಂಶಗಳ ಕುರಿತು ಕೇಂದ್ರ ತಜ್ಞರ ಅಧ್ಯಯನ ನಡೆಸಿ ಈಗ ಅದು ತನ್ನ ವರದಿಯನ್ನು ಕೇಂದ್ರಕ್ಕೆಸಲ್ಲಿಸಿದೆ. ವರದಿಯಿಂದ ಸತ್ಯಾಂಶ ಬಯಲಿಗೆ ಬಂದಿದೆ.ಇದರಿಂದ ನಮ್ಮ ಹೋರಾಟಕ್ಕೆ ಈಗ ನೈತಿಕ ಬಲ ದೊರಕಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡುವಂತೆ ಹಕ್ಕೊತ್ತಾಯ ಮಾಡಲು ಮಾರ್ಚ 10ರಂದು ಹೊನ್ನಾವರದಲ್ಲಿ ರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಶ್ರೀಗಳ ನೇತೃತ್ವ ಮತ್ತು ವಿವಿಧ ಮಠಾದೀಶರು,ಜಿಲ್ಲೆಯ ಉಸ್ತುವಾರಿ ಸಚಿವರು,ಶಾಶಕರು,ಸರ್ವ ಪಕ್ಷಗಳ ಮುಖಂಡರ,ವಿಜ್ಞಾನಿಗಳ,ಹೋರಾಟ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಲಿರುವ ಜನಸಮಾವೇಶ ಈಗ ಹೆಚ್ಚು ಮಹತ್ವ ಪಡೆದುಕೊಂಡಿದೆ.ಆದ್ದರಿಂದ ಶರಾವತಿ ನದಿಪಾತ್ರದ ಜನರು ಮತ್ತು ಜೀವನದಿ ಶರಾವತಿಯನ್ನು ಅವಲಂಬಿಸಿರುವ ಜಿಲ್ಲೆಯ ಎಲ್ಲ ಜನರು ಸಮಾವೇಶದಲ್ಲಿ ಪಾಲ್ಗೊಂಡು ಪಂಪ್ಡ ಸ್ಟೋರೇಜ ಯೋಜನೆಯನ್ನು ಕೈಬಿಡುವಂತೆ ಕೇಂದ್ರ ಮತ್ತು ರಾಜ್ಯಸರಕಾರಗಳನ್ನು ಹಕ್ಕೊತ್ತಾಯ ಮಾಡುವ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಸಮಾವೇಶ ಆಯೋಜನಾ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಚಂದ್ರಕಾಂತ ಕೊಚರೇಕರ ಜನರಿಗೆ ಕರೆನೀಡಿದ್ದಾರೆ.
—–‐——————————————-
:ತಜ್ಞರ ಸಮಿತಿಯ ಅಭಿಪ್ರಾಯಗಳು:
ಯೋಜನೆಯ ಅನುಷ್ಠಾನದಿಂದ
*ಅಗಾಧ ಪ್ರಮಾಣದ ಕಾಡುಗಳ ನಾಶ
*ದೀರ್ಘಕಾಲದಲ್ಲಿ ನದಿಯ ಅವನತಿ
*ವನ್ಯ ಜೀವಿಗಳಿಗೆ ನಿರಂತರ ತೊಂದರೆ
*ವನ್ಯಜೀವಿಗಳ ಆವಾಸಸ್ಥಾನ ಹಾಗೂ ಕೆಲವು ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳ ನಷ್ಟ
*ಭೂಗತ ಬಂಡೆಗಳನ್ನು ಸ್ಪೋಟಿಸಲು ಕೈಗಾರಿಕಾ ಸ್ಪೋಟಕಗಳ ಬಳಕೆ ಮತ್ತು ಭಾರವಾದ ಯಂತ್ರಗಳನ್ನು ಬಳಸುವುದರಿಂದ ಭೂಕುಸಿತ ಹೆಚ್ಚು
*ಯೋಜನೆಯ ಜ್ಯಾರಿಯಿಂದ ರೈತರ ವಾಣಿಜ್ಯಕ ಹಾಗೂ ಇತರ ಬೆಳೆಗಳ ನಾಶ.
*ವನ್ಯ ಜೀವಿಗಳ ಪ್ರಮುಖ ಆವಾಸಸ್ಥಾನವಾಗಿರುವ ದಟ್ಟ ಅರಣ್ಯಗಳಿಗೆ ,ಸ್ಥಳಾಂತರಗೊಂಡ ಕುಟುಂಬಗಳಿಗೆ ಅರಣ್ಯ ಭೂಮಿಯ ಅತೀಕ್ರಮಣ ಸಾದ್ಯತೆ.ಈ ಹಿಂದೆ ಶರಾವತಿ ಆಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಅನೇಕ ಸಂತ್ರಸ್ತ ಕುಟುಂಬಗಳು ದಟ್ಟ ಅರಣ್ಯದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ಉದಾಹರಣೆ ಕಣ್ಣಮುಂದಿದೆ.
*ಕೆ.ಪಿ.ಸಿ.ಎಲ್.ಹೇಳಿಕೆ ನಿರ್ಮಿಸುವ,500ಮೆಘಾವ್ಯಾಟ್ ಗಿಂತಲೂ ನಿವ್ಹಳ ವಿದ್ಯುತ ನಷ್ಟ.ಕೆ.ಪಿ.ಸಿ.ಎಲ್ ಒದಗಿಸಿದ ಅಂಕಿ ಅಂಶಗಳ ಪ್ರಕಾರ ನೈಜ ನಷ್ಟು ಇನ್ನೂ ಹೆಚ್ಚಾಗಿರಲಿದೆ ಎಂಬದು ತಜ್ಞರ ಅಭಿಪ್ರಾಯವಾಗಿದೆ.
————————–‐’———————-
ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ಅನುಷ್ಠಾನದ ವಿರುದ್ಧ ಹೋರಾಟ ಸಂಘಟಿಸಲು ಆರಂಭದಲ್ಲಿ ಚಂದ್ರಕಾಂತ ಕೊಚರೇಕರ,ಮಾರೂತಿ ಗುರೂಜೀ,ಗೇರುಸೊಪ್ಪೆಯ ಮಂಜುನಾಥ ಎಂ.ನಾಯ್ಕ ಕೇಶವ ನಾಯ್ಕ ಬಳ್ಕೂರ,ವಿನೋದ ನಾಯ್ಕ ಮಾವಿನಹೊಳೆ ನೇತೃತ್ವದಲ್ಲಿ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿ ಮತ್ತು ಶಿವಮೊಗ್ಗದಲ್ಲಿ ಸಾಹಿತಿ ನಾ.ಡಿಸೋಜ,ಮೂಲೆಗದ್ದೆ ಮಠದ ಅಭಿನವ ಸ್ವಾಮೀಜಿ,ಅಖಿಲೇಶ ಚಿಪಳಿ,ವಕಿಲೆ ನಿರ್ಮಲಾ ಗೌಡ,ಕುಮಾರ್ ಸ್ವಾಮಿ,ಸಾರಾಧನು ಸಹಿತ ಹಲವು ಪರಿಸರ ತಜ್ಞರ ನೇತ್ರತ್ವದಲ್ಲಿ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಗಳ ರಚನೆಯಾಗಿ ರಾಜ್ಯಾದ್ಯಂತ ಹಲವಾರು ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸಿವೆ.ಹೊನ್ನಾವರ
ದಲ್ಲೂ ವಿಧಾನಸಭೆಯಲ್ಲಿ ಜನರ ದ್ವನಿಯನ್ನು ಶಾಸಕ ದಿನಕರ ಕೆ.ಶೆಟ್ಟಿ ,ಹೋರಾಟ ಪ್ರಮುಖ ಚಂದ್ರಕಾಂತ ಕೊಚರೇಕರ,ಮತ್ತು ಶ್ರೀಕುಮಾರ ಸಾರಿಗೆಯ ಮಾಲಕ ವೆಂಕಟರಮಣ ಹೆಗಡೆ ನೇತೃತ್ವದಲ್ಲಿ ಸರ್ವ ಪಕ್ಷಗಳ ವಿವಿಧ ಪ್ರಮುಖರು,ಹೋರಾಟದ ಮುಂಚೂಣಿಯಲ್ಲಿದ್ದು ಯೋಜನೆಯ ಅನುಷ್ಠಾನದ ವಿರುದ್ಧ ಮಠಾದೀಶರ ನೇತೃತ್ವದಲ್ಲಿ ಮಾರ್ಚ 10ಕ್ಕೆ ಹೊನ್ನಾವರದಲ್ಲಿ ಬ್ರಹತ್ ಜನಸಮಾವೇಶವನ್ನು ಆಯೋಜಿಸಿದ್ದು ಹೋರಾಟ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ.

More Stories
ಸ್ವಾಮೀಜಿ ಎದುರುಗಡೆ ಸಚಿವ ಮಂಕಾಳ ವೈದ್ಯರ ಸುಳ್ಳು ಹೇಳಿಕೆಗೆ ಕ್ಷಮೆ ಕೇಳುವಂತೆ ಮಾಸ್ತಪ್ಪ ನಾಯ್ಕ ಆಗ್ರಹ
ಹೊನ್ನಾವರದಲ್ಲಿ ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ವಿರುದ್ಧ ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಜನಸಮಾವೇಶ.
‘ನಿಯಮ ಪಾಲನೆಯಿಂದ ವೃತ್ತಿ ಗೌರವ ಹೆಚ್ಚಳ’