

ಹೊನ್ನಾವರ: ಆಡಳಿತ ವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಸುವ ಮೂಲಕ ಸಮಾಜದಲ್ಲಿ ಸುಖ ಹಾಗೂ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದೊಂದಿಗೆ ಸರ್ಕಾರ ತನ್ನ ನೌಕರರಿಗೆ ನಿಯಮಾವಳಿಗಳನ್ನು ರೂಪಿಸಿದ್ದು ನಿಯಮ ಪಾಲನೆಯಿಂದ ನೌಕರರ ವೃತ್ತಿ ಗೌರವ ಹೆಚ್ಚುತ್ತದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ನಿವೃತ್ತ ಅಧಿಕಾರಿ ಟಿ.ಆರ್.ಮಂಜುನಾಥ ಅಭಿಪ್ರಾಯಪಟ್ಟರು.
ಎಸ್.ಡಿ.ಎಂ.ಪದವಿ ಕಾಲೇಜಿನ ಐಕ್ಯುಎಸಿ ಘಟಕದ ವತಿಯಿಂದ ಕಾಲೇಜು ಆಡಳಿತ ಸಿಬ್ಬಂದಿಗಳಿಗಾಗಿ ಕರ್ನಾಟಕ ಆಡಳಿತ ಸೇವಾ ನಿಯಮಗಳ ಕುರಿತು ಶನಿವಾರ ನಡೆದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದ ಪ್ರಾಚಾರ್ಯ ಡಾ.ಜಿ.ಎನ್.ಭಟ್ಟ ಮಾತನಾಡಿ,ಕಾನೂನು ಹಾಗೂ ನಿಯಮಗಳ ಕುರಿತು ಸಂಸ್ಥೆಯ ಮುಖ್ಯಸ್ಥ ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿ ತಿಳಿದುಕೊಂಡಿದ್ದರೆ ಆಡಳಿತ ಸುಗಮವಾಗುತ್ತದೆ ಎನ್ನುವ ಉದ್ದೇಶದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎನ್.ಎಂ.ಖಾನ್,ಕರ್ನಾಟಕ ಆಡಳಿತ ಸೇವಾ ನಿಯಮಗಳ ಕುರಿತು ಕಾಲೇಜುಗಳ ಆಡಳಿತ ಸಿಬ್ಬಂದಿಗೆ ಕಾರ್ಯಾಗಾರ ಏರ್ಪಡಿಸುವ ಮೂಲಕ ಎಸ್.ಡಿ.ಎಂ.ಕಾಲೇಜಿನ ಐಕ್ಯುಎಸಿ ಘಟಕ ಉತ್ತಮ ಕಾರ್ಯ ಮಾಡಿದೆ’ ಎಂದು ಶ್ಲಾಘಿಸಿದರು.

ಉಪನ್ಯಾಸಕಿ ಸಂಗೀತಾ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು.ಐಕ್ಯುಎಸಿ ಸಂಚಾಲಕ ಡಾ.ಸುರೇಶ ಎಸ್.ಸ್ವಾಗತಿಸಿದರು.ಪ್ರಾಧ್ಯಾಪಕ ಎಂ.ಜಿ.ಹೆಗಡೆ ಅತಿಥಿ ಪರಿಚಯ ಮಾಡಿದರು.ಉಪನ್ಯಾಸಕರಾದ ಪ್ರಶಾಂತ ಹೆಗಡೆ,ಬಿಂದು ಅವಧಾನಿ,ವಿಶಾಲ್,ತೇಜಸ್ವಿನಿ ಹೆಗಡೆ ನಿರೂಪಿಸಿದರು.ಕಚೇರಿ ಅಧೀಕ್ಷಕ ಆರ್.ಜಿ.ಬಿರಾದಾರ ವಂದಿಸಿದರು.
ಟಿ.ಆರ್.ಮAಜುನಾಥ ಕರ್ನಾಟಕ ಆಡಳಿತ ಸೇವಾ ನಿಯಮಾವಳಿಗಳ ಕುರಿತು ಕಾರ್ಯಾಗಾರದಲ್ಲಿ ವಿಸ್ತçತ ವಿವರಣೆ ನೀಡುವ ಜೊತೆಗೆ ಅಡಳಿತ ಸಿಬ್ಬಂದಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.